ಡಿ.6ರಂದು ಎಸ್ಡಿಪಿಐ ವತಿಯಿಂದ ಬಾಬ್ರಿ ಮಸೀದಿ ಪುನರ್ ನಿರ್ಮಿಸಿ-ಜಾತ್ಯಾತೀತತೆ ಮರುಸ್ಥಾಪಿಸಿ ಕಾರ್ಯಕ್ರಮ
ಮಂಗಳೂರು, ಡಿ.5: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ದೇಶದಾದ್ಯಂತ ಬಾಬ್ರಿ ಮಸೀದಿ ಪುನರ್ ನಿರ್ಮಿಸಿ ಜಾತ್ಯಾತೀತತೆ ಮರುಸ್ಥಾಪಿಸಿ ಎಂಬ ಕಾರ್ಯಕ್ರಮವನ್ನು ಡಿ.6ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಸಭಾ ಕಾರ್ಯಕ್ರಮ, ಪ್ರತಿಭಟನೆ, ಸೆಮಿನಾರ್, ಚರ್ಚಾಕೂಟ ಮತ್ತು ಮೌನ ಮೆರವಣಿಗೆಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಾಬರಿ ಮಸೀದಿಯ ಮಸೀದಿಯ ನ್ಯಾಯಕ್ಕಾಗಿ ಕೈಜೋಡಿಸಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆಯವರು ಹಾಗೂ ಕಾರ್ಯದರ್ಶಿ ಇಬ್ಬಾಲ್ ಬೆಳ್ಳಾರೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





