ಕೇರಳದಲ್ಲೂ ಒಂದು ರೆಡ್ಡಿ, ಗಡ್ಕರಿ ಮಾದರಿ ಮದುವೆ !
ಇದರಲ್ಲಿ ಏನುಂಟು, ಏನಿಲ್ಲ ? ಹಣ ಎಲ್ಲಿಂದ ?

ನೋಟು ರದ್ದತಿಯ ನಡುವೆ ಮತ್ತೊಂದು ಮದುವೆಯ ವಿಷಯವೂ ದೊಡ್ಡ ಚರ್ಚೆಯ ವಿಷಯವಾಗಿದೆ. ಈ ಮದುವೆ ಕಾಂಗ್ರೆಸ್‌ನ ಮಾಜಿ ಸಚಿವ ಆಡೂರ್ ಪ್ರಕಾಶ್ ಅವರ ಮಗ ಮತ್ತು ಮದ್ಯ ಉದ್ಯಮಿ ಬಿಜು ರಮೇಶ್ ಮಗಳದ್ದಾಗಿದೆ. ಡಿಸೆಂಬರ್ 4ರಂದು ಆಗಿರುವ ಈ ಮದುವೆ ಎಂಟು ಎಕರೆಗಳ ಜಾಗದಲ್ಲಿ ನಡೆದಿದೆ. ಮೈದಾನವನ್ನು ಯಾವುದೋ ಸಿನಿಮಾದ ಸೆಟ್ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಮದುವೆಯ ಮಂಟಪ ಅಕ್ಷರದಾಮ ಮಂದಿರದ ಹಾಗೆ ತಯಾರಿಸಲಾಗಿತ್ತು. ಉಳಿದ ಎಲ್ಲಾ ಜಾಗದಲ್ಲೂ ಪ್ರವೇಶ ದ್ವಾರವನ್ನು ಮೈಸೂರು ಅರಮನೆಂುಂತೆ ಅಲಂಕರಿಸಲಾಗಿದೆ.
ರಮೇಶ್ ಅವರ ಪ್ರಕಾರ ಮದುವೆಯಲ್ಲಿ 20,000 ಮಂದಿ ಬರಲಿದ್ದಾರೆ. ರಮೇಶ್ ಅವರು ರಾಜಧಾನಿ ಗ್ರೂಪ್ಸ್‌ನ ಅಧ್ಯಕ್ಷರೂ ಆಗಿದ್ದಾರೆ. ಇದಕ್ಕೆ ಮೊದಲು ಮಾಜಿ ವಿತ್ತಮಂತ್ರಿ ಕೆ ಎಂ ಮಣಿ ಅವರ ಮೇಲೂ ಅಬ್ಬರದ ಆರೋಪ ಹೊರಿಸಿ ಅವರು ಚರ್ಚೆಯಲ್ಲಿದ್ದರು. ಕೆ ಎಂ ಮಣಿ ಯುಡಿಎಫ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.
ನಿಶ್ಚಿತಾರ್ಥ ಕಾರ್ಯಕ್ರಮ ಕೆಲವು ತಿಂಗಳ ಹಿಂದೆಯೇ ಆಗಿತ್ತು. ಆ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಓಮ್ಮನ್ ಚಾಂಡಿ ಮತ್ತು ಹಿರಿಯ ಮುಖಂಡ ಚೆನ್ನಿತಾಲ್ ಅವರೂ ಭಾಗವಹಿಸಿದ್ದರು. ಇದರಿಂದಾಗಿ ಕೇರಳ ಕಾಂಗ್ರೆಸ್ ಅಧ್ಯಕ್ಷ ವಿಎಂ ಸುಧೀರನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸುಧೀರನ್ ಅವರು ರಮೇಶ್ ಅವರ ಆಸ್ತಿ ಸಂಗ್ರಹವನ್ನು ಪ್ರಶ್ನಿಸಿದ್ದರು. ಯುಡಿಎಫ್ ತೊರೆದ ಮಣಿ ಅವರೂ ಚಾಂಡಿ ಮತ್ತು ಚೆನ್ನಿತಾಲ ವಿರುದ್ಧ ಆಕ್ರೋಶ ಕಾರಿದ್ದರು. ಮಣಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿ, ಚೆನ್ನಿತಾಲ ಮತ್ತು ಪ್ರಕಾಶ್ ತಮ್ಮನ್ನು ಸಿಕ್ಕಿಸಿ ಹಾಕಲು ಪ್ರಂುತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಒಂದೆಡೆ ನೋಟು ರದ್ದತಿಯ ವಿಚಾರವಾಗಿ ಕಾಂಗ್ರೆಸ್ ಬಿಜೆಪಿಯನ್ನು ಗುರಿ ಇಟ್ಟಿರುವಾಗ, ಈ ಮದುವೆಯಲ್ಲಿ ಯಾರು ಉಪಸ್ಥಿತರಿದ್ದರು ಎನ್ನುವುದೂ ಮುಖ್ಯವಾಗಿತ್ತು. ಇಷ್ಟೊಂದು ಅಬ್ಬರದಿಂದ ಮದುವೆ ಮಾಡಲು ಹಣ ಎಲ್ಲಿಂದ ಬಂದಿದೆ ಎನ್ನುವ ರಮೇಶ್ ಅವರ ಪ್ರಶ್ನೆಗೆ, ಕೆಲವು ಉದ್ಯಮಿಗಳು ನೆರವು ನೀಡಿರುವುದಾಗಿ ಅವರು ಹೇಳಿದ್ದರು. ಕೆಲವರು ಇನ್ನೂ ಬ್ಯಾಂಕಿನಲ್ಲಿ ಹಣ ಇಟ್ಟಿರದ ಕಾರಣ ನೆರವು ನೀಡಿದರೆ, ಇನ್ನು ಕೆಲವರು ಚೆಕ್ ಕೊಟ್ಟು ಸಹಕರಿಸಿದ್ದಾಗಿ ಅವರು ಹೇಳಿದ್ದಾರೆ. ತಮ್ಮ ಬಳಿ ಯಾವುದೇ ಕಪ್ಪು ಹಣವಿರಲಿಲ್ಲ ಎಂದೂ ಅವರು ಹೇಳಿದ್ದಾರೆ. ಆದರೆ ಪ್ರಕಾಶ್ ಬಳಿ ಈ ಬಗ್ಗೆ ಪ್ರಶ್ನಿಸಿದರೆ ಅವರು ಉತ್ತರಿಸಲು ನಿರಾಕರಿಸಿದರು. ಕೆಲವು ಹಿರಿಯ ಮುಖಂಡರಿಗೆ ಮಾತ್ರ ಆಹ್ವಾನ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮೊದಲು ಜನಾರ್ದನ ರೆಡ್ಡಿಯವರ ಮದುವೆಯೂ ಚರ್ಚೆಯಲ್ಲಿತ್ತು. ಸುದ್ದಿಗಳ ಪ್ರಕಾರ ರೆಡ್ಡಿ ಮಗಳು ಮದುವೆಯಲ್ಲಿ 17 ಕೋಟಿ ಮೌಲ್ಯದ ಸೀರೆ ಮತ್ತು 90 ಕೋಟಿ ರೂಪಾಯಿಗಳ ಆಭರಣ ತೊಟ್ಟಿದ್ದರು.
ಕೃಪೆ:www.jansatta.com







