ಜಯಲಲಿತಾ ನಿಧನದ ಸುದ್ದಿಯನ್ನು ನಿರಾಕರಿಸಿದ ಅಪೋಲೋ ಆಸ್ಪತ್ರೆ
ಚೆನ್ನೈ, ಡಿ. ೫ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಿಗೇ ಈ ಸುದ್ದಿಯನ್ನು ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆ ನಿರಾಕರಿಸಿದೆ.
ತಮಿಳು ಮಾಧ್ಯಮಗಳು ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿದ್ದಾರೆ ಎಂದು ಮೊದಲು ವರದಿ ಮಾಡಿದವು . ಬಳಿಕ ಇಂಗ್ಲಿಷ್ ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿದವು. ಎಐಎಡಿಎಂಕೆ ಕೂಡ ತನ್ನ ಪ್ರಧಾನ ಕಚೇರಿಯ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಿತ್ತು. ಆದರೆ ಆಸ್ಪತ್ರೆ ಮಾತ್ರ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದೆ.
ಅಪೋಲೋ ಹಾಗು ದಿಲ್ಲಿಯ ಏಮ್ಸ್ ನ ವೈದ್ಯರ ತಂಡ ಜಯಲಲಿತಾ ಅವರನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಅಪೋಲೋ ಆಸ್ಪತ್ರೆ ಟ್ವೀಟ್ ಮಾಡಿದೆ.
#ApolloHospitals says #Jayalalithaa still under life saving care: https://t.co/s1YqxV40Gu pic.twitter.com/FJM2EAuBbc
— The Hindu (@TheHindu) December 5, 2016
Chennai: Party flag flying at half mast at AIADMK HQs #jayalalithaa pic.twitter.com/mvan9qvxWH
— ANI (@ANI_news) December 5, 2016