ಮುಂಬೈ: ನೀರಿಗಿಳಿಸುವ ವೇಳೆ ವಾಲಿನಿಂತ ಬೇಟ್ವಾ ಯುದ್ಧ ಹಡಗು

ಮುಂಬೈ, ಡಿ.5: ನೌಕಾಸೇನೆಯ, ನಿರ್ದೇಶಿತ ಕ್ಷಿಪಣಿ ಅಳವಡಿಸಲಾಗಿರುವ ಐಎನ್‌ಎಸ್ ಬೇಟ್ವಾ ಹಡಗು, ಮುಂಬೈಯಲ್ಲಿ ಇಂದು ದಕ್ಕೆಯಿಂದ ಕೆಳಗಿಳಿಸುವ ವೇಳೆ ವಾಲಿಕೊಂಡಿತೆಂದು ನೌಕಾದಳದ ವಕ್ತಾರ ಡಿ.ಕೆ.ಶರ್ಮಾ ತಿಳಿಸಿದ್ದಾರೆ.
3,850 ಟನ್ ಭಾರದ ಈ ಹಡಗು ವಾಲಿಕೊಂಡಿದ್ದು, ನೌಕಾದಳದ ಬಂದರಿನಲ್ಲಿ ಒಂದು ಬದಿಯ ಮೇಲೆ ನಿಂತಿದೆ. ಅದನ್ನು ದುರಸ್ತಿಗೊಳಿಸಿ ದಕ್ಕೆಯ ಮೇಲಿನಿಂದ ನೀರಿಗೆ ಇಳಿಸುವ ವೇಳೆ ವ್ಯವಸ್ಥೆಯಲ್ಲಿ ದೋಷ ಉಂಟಾಗಿ ಪೂರ್ತಿ ಹಡಗು ವಾಲಿಕೊಂಡಿತೆಂದು ಅವರು ಹೇಳಿದ್ದಾರೆ.
ಐಎನ್‌ಎಸ್ ಬೇಟ್ವಾದಲ್ಲಿ ಉರಾನ್ ಹಡಗು ನಾಶಕ ಕ್ಷಿಪಣಿಗಳು, ನೆಲದಿಂದ ನೆಲಕ್ಕೆ ಹಾರುವ ಬರಾಕ್-1 ಕ್ಷಿಪಣಿಗಳು ಹಾಗೂ ಟಾರ್ಪೆಡೊಗಳಿವೆ.
ಮಧ್ಯಪ್ರದೇಶದ ಬೇಟ್ವಾ ನದಿಯ ಹೆಸರಿರಿಸಲಾಗಿರುವ ಈ ಹಡಗು 1988ರಲ್ಲಿ ಮಾಲ್ಡಿವಿಯದ ಒತ್ತೆಯಾಳುಗಳ ರಕ್ಷಣೆ ಹಾಗೂ 2006ರಲ್ಲಿ ಭಾರತೀಯರನ್ನು ಲೆಬನಾನ್‌ನಿಂದ ತೆರವುಗೊಳಿಸಿ ಸೈಪ್ರಸ್‌ಗೆ ಕಳುಹಿಸುವ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು.
Next Story





