ಚಿರತೆ ಪ್ರಕರಣ: ಇನ್ನೋರ್ವ ಆರೋಪಿ ಬಂಧನ
ಅಂಕೋಲಾ, ಡಿ.5: ಕುಮಟಾ ತಾಲೂಕಿನ ಹಿರೇಗುತ್ತಿ ವಲಯ ಅರಣ್ಯ ವ್ಯಾಪ್ತಿಯ ಗುಂಡಬಾಳ ರಸ್ತೆ ಸಮೀಪದಲ್ಲಿ ನ.25 ರಂದು ಅಪಘಾತಕ್ಕೆ ಒಳಗಾಗಿ ಸಾವು ಕಂಡ ಚಿರತೆಯ ಉಗುರುಗಳನ್ನು ಕತ್ತರಿಸಿಕೊಂಡು ಹೋಗಿದ್ದ ಎರಡನೆ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಗುಂಡಬಾಳದ ಬೀರಪ್ಪಅಮಾಸ್ಯೆ ಗೌಡ ಬಂಧಿತ ಆರೋಪಿಯಾಗಿದ್ದು, ಆತನಿಂದ ಚಿರತೆಯ ನಾಲ್ಕ್ಕು ಉಗುರುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮತ್ತು ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಿ.ನಾಯ್ಕ ಅವರ ಮಾರ್ಗದರ್ಶನದಲ್ಲಿ ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಮೋಹನ ಬಿದರಿ ಅವರ ನೇತೃತ್ವದಲ್ಲಿ ಮೂರು ತಂಡಗಳಾಗಿ ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ತಂಡಗಳು ಯಶಸ್ವಿಯಾದವು ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ವಾಯ್.ಎಲ್.ಹಮಾಣಿ, ಜಗದೀಶ ಎಂ. ದೇವಾಡಿಗ, ಪ್ರಶಾಂತ ಬಿ. ಪಟಗಾರ, ಪ್ರದೀಪ ಎಂ. ನಾಯ್ಕ, ಆರ್.ಎಚ್. ನಾಯ್ಕ, ದೇವೆಂದ್ರ ಎಸ್. ಗೊಂಡ, ಪುಂಡ್ಲಿಕ ತಾವರಖೇಡ ಅರಣ್ಯ ರಕ್ಷಕರಾದ ಸಂಗಪ್ಪ ಅಂಗಡಿ ಪಾಲ್ಗೊಂಡಿದ್ದರು.





