Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಡಿ.10ರಿಂದ ಕರಾವಳಿ ಉತ್ಸವ: ಡಿಸಿ ನಕುಲ್

ಡಿ.10ರಿಂದ ಕರಾವಳಿ ಉತ್ಸವ: ಡಿಸಿ ನಕುಲ್

ವಾರ್ತಾಭಾರತಿವಾರ್ತಾಭಾರತಿ5 Dec 2016 10:50 PM IST
share
ಡಿ.10ರಿಂದ ಕರಾವಳಿ ಉತ್ಸವ: ಡಿಸಿ ನಕುಲ್

ಕಾರವಾರ, ಡಿ.5: ಡಿ. 10ರಿಂದ ಆರಂಭವಾಗಲಿರುವ ಮೂರು ದಿನಗಳ ಕರಾವಳಿ ಉತ್ಸವಕ್ಕೆ ಕಾರವಾರ ಸಜ್ಜಾಗುತ್ತಿದ್ದು, ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕರಾದ ಶಾನ್ ಹಾಗೂ ಮೊನಾಲಿ ಠಾಕೂರ್ ಮತ್ತು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.


ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕರಾವಳಿ ಉತ್ಸವದಲ್ಲಿ ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಮಾತ್ರವಲ್ಲದೆ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಮಯೂರವರ್ಮ ವೇದಿಕೆಯಲ್ಲಿ ಹಾಗೂ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ.

ಮಯೂರವರ್ಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 4:30ರಿಂದ ಹಾಗೂ ರಂಗಮಂದಿರದಲ್ಲಿ ಬೆಳಗ್ಗೆ 10:30ರಿಂದ ಪ್ರಾರಂಭವಾಗಲಿದೆ.


ಕಾರ್ಯಕ್ರಮ ವಿವರ: ಡಿ.10ರಂದು ಹಿಂದೂಸ್ಥಾನಿ ಸಂಗೀತ ಸುಜಾತಾ ಗುರವ ಕಮ್ಮಾರ ಧಾರವಾಡ, ನೃತ್ಯ ರೂಪಕ ರಿದಮ್ ಹಾರ್ಟ್ಸ್ ಬೀಟ್ ಕಲಾ ತಂಡ ಕಾರವಾರ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸುರೇಶ ಪಟ್ಕಿ ಪೂಣೆ, ಭರತನಾಟ್ಯ ಎಂ.ಎಸ್.ಶಾಂತಲಾ ಶಿವಲೀಲಾ ಟ್ರಸ್ಟ್ ಬೆಂಗಳೂರು, ನೃತ್ಯ ವೈಭವ ಭಾರ್ಗವಿ ಆರ್ಟ್ಸ್ ಮತ್ತು ಡ್ಯಾನ್ಸ್ ಅಕಾಡಮಿ ಉಡುಪಿ, ಯಕ್ಷಗಾನ ಧರ್ಮಾಂಗಧ ದಿಗ್ವಿಜಯ ಚಿಟ್ಟಾಣಿ ಯಕ್ಷಗಾನ ತಂಡದಿಂದ, ಸಮೂಹ ನೃತ್ಯ ಬ್ರೇಕ್ ಔಟರ್ಸ್‌ ನೃತ್ಯ ತಂಡ ಕಾರವಾರ ಹಾಗೂ ರಸಮಂಜರಿ ಶಾನ್ ಮತ್ತು ತಂಡದಿಂದ ನಡೆಯಲಿದೆ.


ಡಿ.11ರಂದು ಸ್ಟಾರ್ ಚಾಯ್ಸಾ ನೃತ್ಯ ಕಲಾ ಕೇಂದ್ರ ಕಾರವಾರ, ನಾಗಭೂಷಣ್ ತಂಡ ಬೆಂಗಳೂರು ಇವರಿಂದ ಸಂಮೋಹ ನೃತ್ಯ, ಭಾರತೀಯ ನೃತ್ಯ ತಂಡ ಯಲ್ಲಾಪುರ ಭರತನಾಟ್ಯ, ಪರಿಮಳಾ ಗಿರಿಯಾಚಾರ್ ಬಾಗಲಕೋಟೆ ಭಾವ ಸಂಗೀತ, ಅನುರಾಧಾ ಹೆಗಡೆ ಶಿರಸಿ ಇ ವರಿಂದ ದಶಾವತಾರ ನೃತ್ಯ ರೂಪಕ, ತೇಜಸ್ವಿ ಅನಂತ ಬೆಂಗಳೂರು ಎಲ್‌ಇಡಿ ಪಾಯ್, ಆಕ್ಸಿಜನ್ ತಂಡ ಬೆಂಗಳೂರು ಡ್ಯಾನ್ಸ್ ವೈವಿಧ್ಯ, ಪದ್ಮಶ್ರೀ ಗೀತಾ ಮಹಾಲಿಕ್ ದೆಹಲಿ ಒಡಿಸ್ಸಿ ನೃತ್ಯ, ಸಾಧು ಕೋಕಿಲಾ ಅವರಿಂದ ಮ್ಯೂಸಿಕಲ್ ನೈಟ್ಸ್ ನಡೆಯಲಿದೆ.
ಡಿ.12ರಂದು ಟಿಬೆಟಿಯನ್ ನೃತ್ಯ, ಕಾರವಾರ ಕರೋಕೆ ಕ್ಲಬ್ ಚಿತ್ರಗೀತೆಗಳ ಗಾನಯಾನ, ವಿ.ಜೆ.ಲಾಂಜೇಕರ್ ಸುಗಮ ಸಂಗೀತ, ಕಲ್ಪನಾ ರಶ್ಮಿ ಕಲಾಲೋಕ ಸಂಸ್ಥೆ ಕಾರವಾರ ಆಧುನಿಕ ನೃತ್ಯ ವೈಭವ, ಮಹೇಶ ಎಸ್.ಹೆಗಡೆ ಶಿರಸಿ ಗೀತ ಗಾಯನ, ಕುದ್ರೋಳಿ ಗಣೇಶ್ ತಂಡದಿಂದ ಮ್ಯಾಜಿಕ್ ಶೊ, ಕೈಗಾ ಯೋಜನಾ ಮಂಡಳಿ ಬ್ಯಾಲೆ ತಂಡದಿಂದ ಭಗವದ್ ಗೀತಾ ನೃತ್ಯರೂಪಕ, ಎಸ್‌ಎಂಎಸ್ ತಂಡ ಭುವನೇಶ್ವರದಿಂದ ಸ್ಯಾಂಡ್ ಆರ್ಟ್ ಮತ್ತು ಬಾಲಿವುಡ್ ಹಿನ್ನೆಲೆ ಗಾಯಕಿ ಮೊನಾಲಿ ಠಾಕೂರ್ ತಂಡದಿಂದ ಬಾಲಿವುಡ್ ಸಂಜೆ ಕಾರ್ಯಕ್ರಮ ನಡೆಯ ಲಿದೆ ಎಂದರು.


ಉದ್ಘಾಟನಾ ಸಮಾರಂಭ: ಕರಾವಳಿ ಉತ್ಸವವನ್ನು ಅರಣ್ಯ ಸಚಿವ ರಮಾನಾಥ ರೈ ಅಸಂಜೆ 7ಗಂಟೆಗೆ ಉದ್ಘಾಟಿಸುವರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ,ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ,ವಾಣಿಜ್ಯ ಮತ್ತು ಜವಳಿ, ಮುಜರಾಯಿ ಸಚಿವ ರುದ್ರಪ್ಪಲಮಾಳಿ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X