ಡಿ.16ಕ್ಕೆ ಟೆನಿಸ್ ಲೆಜಂಡ್ ಭಾರತಕ್ಕೆ ಭೇಟಿ

ಹೊಸದಿಲ್ಲಿ, ಡಿ.5: ವಿಶ್ವದ ಮಾಜಿ ನಂ.1 ಆಟಗಾರ ಹಾಗೂ ಟೆನಿಸ್ ದಂತಕತೆ ಬೊರಿಸ್ ಬೆಕೆರ್ ಪಾದರಕ್ಷೆಗಳ ಅನಾವರಣ ಕಾರ್ಯಕ್ರಮಕ್ಕಾಗಿ ಡಿ.16ಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಭಾರತದಲ್ಲಿ ಇದೇ ಮೊದಲ ಬಾರಿ ಸೀಮಿತ ಆವೃತ್ತಿಯ ಶೂ ಅನಾವರಣ ನಡೆಯಲಿದೆ ಎಂದು ಪ್ಯೂಮಾ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
‘‘ನಾನು ಭಾರತದ ಭೇಟಿಯನ್ನು ಎದುರು ನೋಡುತ್ತಿರುವೆ. ಡಿ.17 ರಂದು ಕೋಲ್ಕತಾದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡುವೆ. ರನ್ನಿಂಗ್ ಉತ್ತಮ ಕ್ರೀಡೆ. ಯಾವುದೇ ಕ್ರೀಡೆಯಲ್ಲಿ ಓಟ ಅವಿಭಾಜ್ಯ ಅಂಗ’’ ಎಂದು ಬೆಕೆರ್ ಹೇಳಿದ್ದಾರೆ.
Next Story





