ವಿಶ್ವ ವಿಶೇಷ ಅಗತ್ಯವುಳ್ಳ ಮಕ್ಕಳ ದಿನಾಚರಣೆ
ಮಂಗಳೂರು, ಡಿ.5: ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ,ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಸರ್ವ ಶಿಕ್ಷಣ ಅಭಿಯಾನ ದ.ಕ. ಹಾಗೂ ಲಯನ್ಸ್ ಕ್ಲಬ್ ನೇತ್ರಾವತಿ ಇವರ ಸಹಯೋಗದಲ್ಲಿ ಬ್ಲಾಕ್ ಮಟ್ಟದ ವಿಶ್ವ ವಿಶೇಷ ಅಗತ್ಯವುಳ್ಳ ಮಕ್ಕಳ ದಿನಾಚರಣೆ ಇತ್ತೀಚೆಗೆ ಉರ್ವ ಪೊಂಪೈ ಚರ್ಚ್ ಹಾಲ್‌ಲ್ಲಿ ನಡೆಯಿತು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಯೋಜನಾ ಸಮನ್ವಯಾಧಿಕಾರಿ ಲೋಕೇಶ್ ಪಿ. ಕಾರ್ಯಕ್ರಮ ಉದ್ಘಾಟಿಸಿ, ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಮನೋಸ್ಥೆರ್ಯ ಹೆಚ್ಚಿಸಬೇಕು, ಇಲಾಖೆ ನೀಡುವ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ., ಕಾರ್ಪೋರೇಟರ್‌ರಾದ ಜಯಂತಿ ಆಚಾರ್ ಉಪಸ್ಥಿತರಿದ್ದರು.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹಾಗೂ ಪೋಷಕರಿಗೆ ನಡೆಸಿದ ಆಟೋಟ-ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗೀತಾ ದೇವದಾಸ್, ಜೇಮ್ಸ್ ಕುಟಿನ್ಹೊ, ರಘುನಾಥ್, ಶಿಕ್ಷಣ ಸಂಯೋಜಕ ಉಸ್ಮಾನ್, ಶೀಲಾವತಿ, ಚಂದ್ರಕಲಾ ದೀಪಕ್, ಆಶಾ ನಾಗರಾಜ್, ಗೀತಾ ಕಲ್ಯಾಣ್‌ಪುರ್ ಜ್ಯೋತಿ ಶೆಟ್ಟಿ, ದೇವದಾಸ್ ಭಂಡಾರಿ, ಮೋಹನ್‌ದಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







