ಜಯಲಲಿತಾ ಅಸಾಧಾರಣ ರಾಜಕೀಯ ಪ್ರತಿಭೆ: ಪಿಣರಾಯಿ

ತಿರುವನಂತಪುರಂ, ಡಿ. 6: ಭಾರತ ಕಂಡ ಅಸಾಧಾರಣ ರಾಜಕೀಯ ಪ್ರತಿಭೆ ತಮಿಳ್ನಾಡಿನ ಮುಖ್ಯಮಂತ್ರಿ ಜಯಲಲಿತಾ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಮರಿಸಿಕೊಂಡಿದ್ದಾರೆಂದು ವರದಿಯಾಗಿದೆ. ಅನದೃಶವಾದ ನಾಯಕತ್ವಪಟುತ್ವ, ಅತ್ಯಪೂರ್ವವಾದ ಆಡಳಿತ ನೈಪುಣ್ಯ ಇವು ಭಾರತೀಯ ರಾಜಕೀಯದಲ್ಲಿ ಜಯಲಲಿತಾರನ್ನು ವಿಶೇಷವ್ಯಕ್ತಿತ್ವದ ಒಡತಿಯನ್ನಾಗಿಸಿತು ಎಂದು ಅವರು ಹೇಳಿದ್ದಾರೆ.
ಕೇರಳದೊಂದಿಗೆ ಅವರು ವಿಶೇಷ ಮಮತೆಯ ಸಂಬಂಧವನ್ನು ಹೊಂದಿದ್ದರು. ತಮಿಳರು ಮತ್ತು ಕೇರಳೀಯರ ನಡುವೆ ಸೌಹಾರ್ದ ನೆಲೆಸಲುಪರಿಶ್ರಮಿಸಿದರು. ಕಲಾರಂಗದಿಂದ ರಾಜಕೀಯ ರಂಗಕ್ಕೆ ಬಂದು ಕೆಲವೇ ಸಮಯದಲ್ಲಿ ರಾಜಕೀಯ ರಂಗದಲ್ಲಿ ಅಸಾಧಾರಣ ವ್ಯಕ್ತಿ ಪ್ರಭಾವವನ್ನು ಬೆಳೆಸಿಕೊಂಡರು. ಈ ಪ್ರಕ್ರಿಯೆಯಲ್ಲಿ ಜಯಲಲಿತಾ ಮಾತೃಮೂರ್ತಿಯಾಗಿ ತಮಿಳ್ನಾಡಿನಲ್ಲಿ ಬೆಳೆದು ನಿಂತರು. ಬಡವರಿಗೆ ಭರವಸೆಯ ಹಲವಾರು ಕಾರ್ಯಕ್ರಮಗಳನ್ನು ಜಯಲಲಿತಾ ಜಾರಿಗೆ ತಂದಿದ್ದಾರೆ. ಒಂದು ಜನತೆಯ ಮೇಲೆ ಇಷ್ಟು ಅಗಾಧ ಪ್ರಮಾಣದಲ್ಲಿ ಪ್ರಭಾವ ಬೀರಿದ ಮುಖ್ಯಮಂತ್ರಿಗಳು ದೇಶದಲ್ಲಿ ಹೆಚ್ಚು ಮಂದಿ ಇಲ್ಲ ಎಂದು ಜಯಲಲಿತಾ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿ ತಿಳಿಸಿದೆ.





