Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಈಜುಕೊಳದಲ್ಲಿ ಜೊತೆಗಿದ್ದವರು...

ಈಜುಕೊಳದಲ್ಲಿ ಜೊತೆಗಿದ್ದವರು ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲು

ಪುತ್ತೂರಿನ ಖಾಸಗಿ ಈಜುಕೊಳದಲ್ಲಿ ಕ್ರೀಡಾಪಟು ವಿದ್ಯಾರ್ಥಿಯ ಮೃತ್ಯು ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ6 Dec 2016 6:19 PM IST
share
ಈಜುಕೊಳದಲ್ಲಿ ಜೊತೆಗಿದ್ದವರು ಆಘಾತಕ್ಕೊಳಗಾಗಿ  ಆಸ್ಪತ್ರೆಗೆ ದಾಖಲು

ಪುತ್ತೂರು, ಡಿ.6 : ಪುತ್ತೂರು ನಗರದ ಹೊರವಲಯದ ದರ್ಬೆ ಬೈಪಾಸ್ ರಸ್ತೆ ಸಮೀಪವಿರುವ ಖಾಸಗಿ ಈಜುಕೊಳವೊಂದರಲ್ಲಿ ತನ್ನ ಸಹಪಾಠಿಗಳಿಬ್ಬರ ಜೊತೆ ಈಜಲು ಹೋದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಸಂದರ್ಭ ಜೊತೆಗಿದ್ದ ವಿದ್ಯಾರ್ಥಿಗಳಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದು ಈ ಈಜುಕೊಳದಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದ ಎರಡನೇ ದುರಂತವಾಗಿದೆ.

 ಬೆಳಿಗ್ಗೆ ಪುತ್ತೂರು ಕೊಂಬೆಟ್ಟುವಿನಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದಿದ್ದ ಸ್ವಿಝ್ಲರ್ ಮೋರ್ನಿಂಗ್ ಪಂದ್ಯಾಟದಲ್ಲಿ ಆಟವಾಡಿ ಬಳಿಕ ಫಿಲೋಮಿನಾ ಕಾಲೇಜಿನಲ್ಲಿ ಎಂದಿನಂತೆ ಕ್ರಿಕೆಟ್ ತರಬೇತಿಯಲ್ಲಿ ತೊಡಗಿದ್ದರು. ಆ ಬಳಿಕ ಕಾರ್ತಿಕ್ ಅವರು ತನ್ನ ಸಹಪಾಠಿಗಳಾದ ಭುವನೇಂದ್ರ ಹಾಗೂ ಸಾಗರ್ ಎಂಬವರ ಜೊತೆ ದರ್ಬೆ ಬೈಪಾಸ್ ರಸ್ತೆಯ ಸಮೀಪವಿರುವ ಕುಶಾಲಪ್ಪ ಅಭಿಕಾರ್ ಎಂಬವರ ಒಡೆತನದ ಎ.ಎಸ್.ಆರ್.ಈಜುಕೊಳಕ್ಕೆ ಈಜಲು ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ.

ಹೃದಯಾಘಾತ ಘಟನೆ

 ಕಾರ್ತಿಕ್ ಈಜು ಬಲ್ಲವರಾಗಿದ್ದು, ಆರಂಭದಲ್ಲಿ ಈಜು ಕೊಳಕ್ಕಿಳಿದು ತನ್ನ ಸಹಪಾಠಿಗಳ ಜೊತೆ ಈಜಾಡಿದ್ದ ಅವರು,  ಈಜು ಕೊಳದಿಂದ ಮೇಲಕ್ಕೇರಿದ ಸಂದರ್ಭದಲ್ಲಿ ಸುಸ್ತಾದವರಂತೆ ಕಂಡು ಬಂದಿದ್ದರು. ಆ ಬಳಿಕ ಮೊತ್ತೊಮ್ಮೆ ಈಜುಕೊಳದ ದಡದಿಂದ ನೀರಿಗೆ ಧುಮಿಕಿದ ಅವರು ತಳಭಾಗದಲ್ಲಿ ಬಿದ್ದ ಸ್ಥಿತಿಯಲ್ಲೇ ಉಳಿದುಮೊಂಡು ಕಾಲು ಬಡಿಯತೊಡಗಿದ್ದರು. ಕಾರ್ತಿಕ್ ಅವರು ತಳದಿಂದ ಮೇಲೆ ಬಾರದ ಹಿನ್ನಲೆಯಲ್ಲಿ ಅವರ ಸಹಪಾಠಿಯಾದ ಸಾಗರ್ ಅವರು ಕಾರ್ತಿಕ್ ನೀರಿನೊಳಗಿದ್ದ ಸ್ಥಳಕ್ಕೆ ಈಜುಕೊಂಡು ಹೋಗಿ ಅವರನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದ್ದು, ಬಳಿಕ ಸಾಗರ್ ಅವರೊಂದಿಗೆ ಭುವನೇಂದ್ರ ಮತ್ತು ಈಜುಕೊಳದ ಯುವಕನೊಬ್ಬ ಸೇರಿಕೊಂಡು ಕಾರ್ತಿಕ್ ಅವರನ್ನು ಈಜುಕೊಳದ ದಡಕ್ಕೆ ಎತ್ತಿಕೊಂಡು ಬಂದು ಪ್ರಥಮ ಚಿಕಿತ್ಸೆಯಲ್ಲಿ ತೊಡಗಿದ್ದರೂ ಆ ವೇಳೆಗಾಗಲೇ ಕಾರ್ತಿಕ್ ಅವರು ಮೃತಪಟ್ಟಿದ್ದರು.

ಕಾರ್ತಿಕ್ ಅವರು 4 ಅಡಿಯಷ್ಟು ನೀರಿರುವ ಭಾಗದಲ್ಲಿ ಮೃತಪಟ್ಟಿದ್ದು, ಈ ಎಲ್ಲಾ ದೃಶ್ಯಗಳು ಈಜು ಕೊಳಕ್ಕೆ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಇದರಿಂದಾಗಿ ನೀರಿಗೆ ಧುಮಿಕಿದ ಕಾರ್ತಿಕ್ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದು ದೃಢಪಟ್ಟಿದೆ.

ಸ್ಥಳಕ್ಕೆ ಭೇಟಿ ನೀಡಿ ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ , ಎಸ್‌ಐ ಒಮನಾ ಹಾಗೂ ಸಿಬ್ಬಂದಿ ಇದೊಂದು ಅಸಹಜ ಸಾವಿನ ಪ್ರಕರಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.

ಆಘಾತಕ್ಕೊಳಗಾದವರ ಚೇತರಿಕೆ

 ಈ ಘಟನೆಯ ವೇಳೆ ಕಾರ್ತಿಕ್ ಜೊತೆಗಿದ್ದ ಅವರ ಸಹಪಾಠಿ ವಿದ್ಯಾರ್ಥಿಗಳಾದ ಭುವನೇಂದ್ರ ಮತ್ತು ಚಿಕ್ಕಮಗಳೂರಿನ ಸಾಗರ್ ಅವರು ಆಘಾತಕ್ಕೊಳಗಾಗಿದ್ದು, ಭುವನೇಂದ್ರ ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಮತ್ತು ಸಾಗರ್ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆಯ ವೇಳೆಗೆ ಅವರು ಆಘಾತದಿಂದ ಚೇತರಿಸಿಕೊಂಡಿದ್ದಾರೆ.

 ಅಭಿಕಾರ್ ಕುಟುಂಬದವರು ನಡೆಸುತ್ತಿರುವ ಎ.ಎಸ್.ಆರ್ ಈಜು ಕೊಳದಲ್ಲಿ ನಡೆದ ಎರಡನೇ ಸಾವಿನ ದುರಂತ ಇದಾಗಿದೆ. ಕಳೆದ ಎಫ್ರಿಲ್ ತಿಂಗಳಿನಲ್ಲಿ ಪುತ್ತೂರು ತಾಲ್ಲೂಕಿನ ಚಾರ್ವಾಕದ ಯುವಕನೊಬ್ಬ ಇದೇ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದ.

 ಕೆಲ ತಿಂಗಳ ಹಿಂದೆ ಇದೇ ಈಜುಕೊಳದಲ್ಲಿ ಮುಳುಗಿ ಜೀವನ್ಮರಣ ಹೋರಾಟದಲ್ಲಿದ್ದ ಯುವಕನೊಬ್ಬನನ್ನು ಇದೇ ಈಜುಕೊಳಕ್ಕೆ ಈಜಲು ಹೋಗಿದ್ದ ಫಿಲೋಮಿನಾ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಅಖಿಲೇಶ್ ಎಂಬವರು ತನ್ನಿಬ್ಬರು ಸ್ನೇಹಿತರ ಸಹಕಾರದೊಂದಿಗೆ ನೀರಿನಿಂದ ಮೇಲಕ್ಕೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದರು ಎಂಬ ವಿಚಾರ ತಿಳಿದು ಬಂದಿದೆ.

ಇಲ್ಲಿ ವ್ಯವಸ್ಥೆ ಅಷ್ಟೊಂದು ಸರಿಯಿಲ್ಲ. ಹಣಕ್ಕಾಗಿ ಮಾತ್ರ ಮಾಡುತ್ತಿದ್ದಾರೆ. ಹಣ ಪಡೆದುಕೊಂಡು ಹೋಗುತ್ತಾರೆಯೇ ಹೊರತು ಮತ್ತೆ ಈಜು ಗೊತ್ತಿದೆಯೇ, ಇಲ್ಲವೇ ಎಂಬುವುದನ್ನು ಗಮನಿಸುತ್ತಿಲ್ಲ ಎಂದು ಈ ಹಿಂದೆ ಯುವಕರೊಬ್ಬರನ್ನು ರಕ್ಷಿಸಿದ್ದ ಅಖಿಲೇಶ್ ಅವರು ಆರೋಪಿಸಿದ್ದಾರೆ. ವ್ಯವಸ್ಥೆಯನ್ನು ಸರಿಪಡಿಸಬೇಕು ಇಲ್ಲದಿದ್ದಲ್ಲಿ ಅದನ್ನು ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತಿಭಾವಂತ ಕ್ರೀಡಾಪಟು

ಕಾರ್ತಿಕ್ ಪ್ರತಿಭಾವಂತ ಕ್ರೀಡಾಪಟುವಾಗಿದ್ದರು. ಉತ್ತಮ ಬೌಲರ್ ಹಾಗೂ ಸರ್ವಾಂಗೀಣ ಆಟಗಾರರಾಗಿದ್ದ ಅವರು ಮಂಗಳೂರು ವಿವಿ ಕ್ರಿಕೇಟ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಕ್ರಿಕೇಟ್ ಮಾತ್ರವಲ್ಲದೆ ಕಬಡ್ಡಿ ಆಟಗಾರನೂ ಆಗಿದ್ದ ಕಾರ್ತಿಕ್ ಅವರು ಎನ್‌ಸಿಸಿ ಯಲ್ಲಿಯೂ ಸಕ್ರೀಯರಾಗಿದ್ದರು.

ಪುತ್ತೂರು ತಾಲ್ಲೂಕಿನ ಆಲಂಕಾರಿನಲ್ಲಿ ದೀಕ್ಷಾ ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಗಂಗಾಧರ ರೈ ಮತ್ತು ಬ್ಯುಟೀಷಿಯನ್ ಆಗಿರುವ ಸವಿತಾ ದಂಪತಿಯ ಇಬ್ಬರು ಪುತ್ರರಲ್ಲಿ ಕಾರ್ತಿಕ್ ಮೊದಲನೆಯವರು. ಅವರ ಸಹೋದರ ಹೃತಿಕ್ ರೈ ರಾಮಕುಂಜ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮೂಲತಃ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಸಮೀಪದ ತೊಟ್ಲ ನಿವಾಸಿಯಾಗಿದ್ದು, ಪ್ರಸ್ತುತ ಆಲಂಕಾರಿನಲ್ಲಿ ವಾಸ್ತವ್ಯವಿರುವ ಗಂಗಾಧರ ರೈ ಅವರ ಪುತ್ರ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ರೈ (19) ಮೃತಪಟ್ಟ ಯುವಕ.  ಸರ್ವಾಂಗೀಣ ಕ್ರಿಕೇಟ್ ಆಟಗಾರನಾಗಿದ್ದ ಕಾರ್ತಿಕ್ ರೈ ಅವರು ಮಂಗಳೂರು ವಿವಿ ತಂಡ ಸದಸ್ಯರಾಗಿದ್ದು, ಎಂಪಿಎಲ್ ಪಂದ್ಯಾಟ ಆಡಲು ಅಭ್ಯಾಸ ನಡೆಸುತ್ತಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ತನ್ನ ಸ್ನೇಹಿತರ ಜೊತೆ ರಜೆಯ ಸಂದರ್ಭದಲ್ಲಿ ಉಳಿದುಕೊಂಡಿದ್ದರು ಎಂದು ಉಳಿದು ಬಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X