Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಟ್ರಂಪ್ ಪರ ಸುಳ್ಳು ಸುದ್ದಿ...

ಟ್ರಂಪ್ ಪರ ಸುಳ್ಳು ಸುದ್ದಿ ಸೃಷ್ಟಿಸುವುದೇ ಈ ನಗರದ ಪ್ರಮುಖ ಉದ್ಯಮ!

ವಾರ್ತಾಭಾರತಿವಾರ್ತಾಭಾರತಿ6 Dec 2016 6:37 PM IST
share
ಟ್ರಂಪ್ ಪರ ಸುಳ್ಳು ಸುದ್ದಿ ಸೃಷ್ಟಿಸುವುದೇ ಈ ನಗರದ ಪ್ರಮುಖ ಉದ್ಯಮ!

ವೆಲೆಸ್(ಮ್ಯಾಸಿಡೋನಿಯಾ),ಡಿ.6: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭ ನಾಯಿಕೊಡೆಗಳಂತೆ ತಲೆಯೆತ್ತಿದ್ದ ಹೆಚ್ಚಿನ ಸುಳ್ಳುಸುದ್ದಿಗಳ ವೆಬ್‌ಸೈಟ್‌ಗಳು ಸೇರಿದ್ದು ಮ್ಯಾಸಿಡೋನಿಯಾದ ಈ ಪುಟ್ಟ ಊರಿಗೆ ಎನ್ನುವುದು ಈಗ ಬೆಳಕಿಗೆ ಬಂದಿದೆ. ಜಾಹೀರಾತುಗಳಿಂದ ಹಣ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿ ರುವ ಇಲ್ಲಿಯ ಹದಿಹರೆಯದ ಯುವಕರು ಸತ್ಯದ ತಲೆಯ ಮೇಲೆ ಹೊಡೆಯುವಂತಹ ಸುಳ್ಳು ರೋಚಕ ಸುದ್ದಿಗಳನ್ನು ಪುಂಖಾನುಪುಂಖವಾಗಿ ಹೊರಹಾಕುತ್ತಲೇ ಇರುತ್ತಾರೆ.

ಇಲ್ಲಿಯ ಕೆಫೆಗಳಲ್ಲಿ, ರೆಸ್ಟೋರಂಟ್‌ಗಳಲ್ಲಿ.....ಬಾರ್‌ಗಳಲ್ಲಿಯೂ ಇಂತಹ ಸುಳ್ಳುಸುದ್ದಿ ಗಳನ್ನು ಹೆಣೆಯುವುದರಲ್ಲಿ ಮಗ್ನರಾಗಿರುವ ಹುಡುಗರು ಕಾಣಸಿಗುತ್ತಾರೆ.ಅವರು ಧರಿಸಿರುವ ದುಬಾರಿ ಉಡುಪುಗಳು,ಡಿಸೈನರ್ ವಾಚುಗಳು,ಮಾಡುತ್ತಿರುವ ಖರ್ಚುಗಳು ಅವರು ಈ ಸುಳ್ಳುಸುದ್ದಿಗಳಿಂದ ಕೈತುಂಬ ದುಡ್ಡು ಸಂಪಾದಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ. ಈ ಊರಿನಲ್ಲಿ ಉದ್ಯೋಗಗಳಲ್ಲಿರುವವರ ಮಾಸಿಕ ವೇತನ ಸರಾಸರಿ 350 ಯುರೋ ದಾಟುವುದಿಲ್ಲ. ಆದರೆ ಈ ಸುಳ್ಳುಸುದ್ದಿಗಳ ಸೃಷ್ಟಿಕರ್ತರು ತಿಂಗಳಿಗೆ ಕನಿಷ್ಠ ಒಂದೆರಡು ಸಾವಿರ ಯುರೋಗಳನ್ನು ಸಂಪಾದಿಸುತ್ತಾರೆ.

ವೆಲೆಸ್‌ನಲ್ಲಿ ಇದೊಂದು ಗುಡಿ ಕೈಗಾರಿಕೆಯಂತಾಗಿಬಿಟ್ಟಿದೆ. ಅಮೇರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭ ಡೊನಾಲ್ಡ್ ಟ್ರಂಪ್ ಪರವಾಗಿ ಸಹಸ್ರಾರು ಸುಳ್ಳುಸುದ್ದಿಗಳನ್ನು ಇಲ್ಲಿಯ ಹುಡುಗರು ಸೃಷ್ಟಿಸಿ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದರು.

ಕಳೆದ ಬೇಸಿಗೆಯಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯು ಕಾವೇರಿದ್ದಾಗ ವೆಲೆಸ್‌ನ ಯುವಜನರು ಬಲಪಂಥೀಯ ಅಮೆರಿಕನ್ ವೆಬ್‌ಸೈಟ್‌ಗಳನ್ನು ತಡಕಾಡಿ ರೋಚಕ ಸುದ್ದಿಗಳನ್ನೆತ್ತಿಕೊಂಡಿದ್ದರು. ವಿವಿಧ ಲೇಖನಗಳ ಕಾಪಿಯಿಂಗ್ ಮತ್ತು ಪೇಸ್ಟಿಂಗ್ ಬಳಿಕ ಅದಕ್ಕೆ ತಮ್ಮದೊಂದಿಷ್ಟು ಸುಳ್ಳನ್ನು ಬೆರೆಸಿ ಟ್ರಂಪ್‌ರನ್ನು ವೈಭವೀಕರಿಸಿ ಅವುಗಳನ್ನು ಟಂ್ರಪ್ ಸುದ್ದಿಗಾಗಿ ಹಸಿದುಕೊಂಡಿದ್ದ ಅಮೆರಿಕದ ಜನರನ್ನು ಗುರಿಯಾಗಿಸಿಕೊಂಡು  ವೆಬ್‌ಸೈಟ್‌ಗಳಿಗೆ ಪೋಸ್ಟ್ ಮಾಡುತ್ತಿದ್ದರು. ಅಮೆರಿಕನ್ನರು ಇಂತಹ ಸುದ್ದಿಗಳ ಮೇಲೆ ಕ್ಲಿಕ್ ಮಾಡಿದಾಗೆಲ್ಲ ವೆಬ್‌ಸೈಟ್‌ಗಳಲ್ಲಿನ ಜಾಹೀರಾತುಗಳಿಂದ ಅವರಿಗೆ ಆದಾಯ ಹರಿದು ಬರುತ್ತಿತ್ತು.

ನಿಮ್ಮ ಇಂತಹ ಸುಳ್ಳುಸುದ್ದಿಗಳು ಅಮೆರಕದ ಮತದಾರರ ಮೇಲೆ ಅನುಚಿತ ಪ್ರಭಾವ ಬೀರಿರಬಹುದಲ್ಲವೇ ಎಂಬ ಪ್ರಶ್ನೆಯನ್ನು ಕೇಳಿದರೆ ಇಲ್ಲಿಯ ಸುಳ್ಳುಸುದ್ದಿ ಸೃಷ್ಟಿಕರ್ತರು ನಕ್ಕುಬಿಡುತ್ತಾರೆ. ಅಮೆರಿಕದವರು ಯಾರಿಗೆ ಬೇಕಾದರೂ ಮತ ಹಾಕಿರಲಿ,ನಮಗೇಕೆ ಅದರ ಗೊಡವೆ ಎನ್ನುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X