ರಂಗಭೂಮಿ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟ
‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕಕ್ಕೆ ಅಗ್ರ ಪ್ರಶಸ್ತಿ

ಉಡುಪಿ, ಡಿ.6: ಉಡುಪಿ ರಂಗಭೂಮಿ ಸಂಸ್ಥೆ ಡಾ.ಟಿಎಂಎ ಪೈ, ಎಸ್. ಎಲ್. ನಾರಾಯಣ ಭಟ್ ಹಾಗೂ ಮಲ್ಪೆಮಧ್ವರಾಜ್ ಸ್ಮರಣಾರ್ಥ ನಡೆಸಿದ 37ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬೆಂಗಳೂರಿನ ‘ದೃಶ್ಯಕಾವ್ಯ’ ತಂಡ ಪ್ರದರ್ಶಿಸಿದ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕವು ಅಗ್ರಸ್ಥಾನದೊಂದಿಗೆ ಡಾ.ಟಿಎಂಎ ಪೈ ಸ್ಮಾರಕ ಪರ್ಯಾಯ ಫಲಕ ಮತ್ತು ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.25,000ನ್ನು ಗೆದ್ದುಕೊಂಡಿದೆ.
ತುಮಕೂರಿನ ಸಮ್ಮತ ಥಿಯೇಟರ್ ತಂಡದ ‘ಮೌನಿ’ ನಾಟಕ ದ್ವಿತೀಯ ಸ್ಥಾನದೊಂದಿಗೆ ಕೆ.ಆನಂದ ಗಾಣಿಗ ಸ್ಮಾರಕ ನಗದು ಬಹುಮಾನ ರೂ.20,000 ಮತ್ತು ಮೈಸೂರಿನ ಜಿಪಿಐಇಆರ್ ರಂಗತಂಡದ ‘ಸಿರಿ’ ನಾಟಕ ಡಾ.ಪಿ. ಗಣಪತಿ ರಾವ್ ಮತ್ತು ಪಿ.ವಾಸುದೇವ ರಾವ್ ಪ್ರಾಯೋಜಿತ ತೃತೀಯ ನಗದು ಬಹುಮಾನ ರೂ.15,000ವನ್ನು ಗೆದ್ದುಕೊಂಡಿವೆ.
‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ಐತಿಹಾಸಿಕ ನಾಟಕದ ನಿರ್ದೇಶಕ ನಂಜುಂಡೇಗೌಡ ಸಿ. ಅವರು ಶ್ರೇಷ್ಠ ನಿರ್ದೇಶನಕ್ಕಾಗಿರುವ ಡಾ. ಟಿಎಂಎ ಪೈ ಪರ್ಯಾಯ ಫಲಕ ಮತ್ತು 2,000ರೂ. ನಗದು ಬಹುಮಾನ ಪಡೆದರೆ, ‘ವೌನಿ’ ನಾಟಕದ ನಿರ್ದೇಶಕ ಚೇತನ್ ನೀನಾಸಂ ಮತ್ತು ಸುಮನಸಾ ಕೊಡವೂರು ತಂಡದ ‘ಮುದ್ರಾರಾಕ್ಷಸ’ ನಾಟಕ ನಿರ್ದೇಶಿಸಿದ ವಿದ್ದು ಉಚ್ಚಿಲ ಕ್ರಮವಾಗಿ ಶ್ರೇಷ್ಠ ನಿರ್ದೇಶನಕ್ಕಾಗಿರುವ ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಆಯ್ಕೆಯಾದರು. ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ಐತಿಹಾಸಿಕ ನಾಟಕದ ನಿರ್ದೇಶಕ ನಂಜುಂಡೇಗೌಡ ಸಿ. ಅವರು ಶ್ರೇಷ್ಠ ನಿರ್ದೇಶನಕ್ಕಾಗಿರುವ ಡಾ. ಟಿಎಂಎ ಪೈ ಪರ್ಯಾಯ ಫಲಕ ಮತ್ತು 2,000ರೂ. ನಗದು ಬಹುಮಾನ ಪಡೆದರೆ, ‘ಮೌನಿ’ ನಾಟಕದ ನಿರ್ದೇಶಕ ಚೇತನ್ ನೀನಾಸಂ ಮತ್ತು ಸುಮನಸಾ ಕೊಡವೂರು ತಂಡದ ‘ಮುದ್ರಾರಾಕ್ಷಸ’ ನಾಟಕ ನಿರ್ದೇಶಿಸಿದ ವಿದ್ದು ಉಚ್ಚಿಲ ಕ್ರಮವಾಗಿ ಶ್ರೇಷ್ಠ ನಿರ್ದೇಶನಕ್ಕಾಗಿರುವ ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಆಯ್ಕೆಯಾದರು.
ನಾಟಕ ಸ್ಪರ್ಧೆಯಲ್ಲಿ ಉಳಿದ ಪ್ರಶಸ್ತಿ ವಿಜೇತರ ವಿವರ
ಶ್ರೇಷ್ಠ ನಟ:
ಪ್ರಥಮ-ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಾಟಕದ ರಾಜ ಒಕ್ಕಾಕ ಪಾತ್ರಧಾರಿ ಮಹೇಶ್ ಟಿ. ಆರ್. (1000ರೂ. ನಗದು),
ದ್ವಿತೀಯ-ಮೌನಿ ನಾಟಕದ ಕುಪ್ಪಣ್ಣ ಭಟ್ಟ ಪಾತ್ರಧಾರಿ ಆನಂದ ನೀನಾಸಂ,
ತೃತೀಯ- ಮುದ್ರಾರಾಕ್ಷಸ ನಾಟಕದ ಅಮಾತ್ಯ ರಾಕ್ಷಸ ಪಾತ್ರಧಾರಿ ರಾಜಗೋಪಾಲಶೇಟ್.
ಶ್ರೇಷ್ಠ ನಟಿ:
1.ಸೂರ್ಯಾಸ್ತದಿಂದ ಸೂರ್ಯೋದಯದವರಗೆ ನಾಟಕದ ರಾಣಿ ಶೀಲವತಿ ಪಾತ್ರಧಾರಿ ಸಿತಾರ ನೀನಾಸಂ (ರೂ.1000)
2.ಮೌನಿ ನಾಟಕದ ಗೌರ ಪಾತ್ರಧಾರಿ ಸಂಧ್ಯ ನೀನಾಸಂ,
3. ಆಷಾಢದ ಒಂದು ದಿನ ನಾಟಕದ ಮಲ್ಲಿಕ ಪಾತ್ರಧಾರಿ ಕ್ಷಮ ಟಿ.ವಿ.
ಶ್ರೇಷ್ಠ ಸಂಗೀತ:
1. ದೃಶ್ಯಕಾವ್ಯ ಬೆಂಗಳೂರು ತಂಡದ ಸೂರ್ಯಾಸ್ತದಿಂದ ಸೂರ್ಯೋದಯದವರಗೆ (ರೂ.1000),
2. ಜಿಪಿಐಇಆರ್ ರಂಗ ತಂಡ ಮೈಸೂರು ಇವರ ಸಿರಿ, 3.ಡ್ರಾಮಾಟ್ರಿಕ್ಸ್ ಬೆಂಗಳೂರು ತಂಡದ ಅರಳಿದ ಗಜಲುಗಳು.
ಶ್ರೇಷ್ಠ ರಂಗಪರಿಕರ: ಸುಮನಸ ಕೊಡವೂರು ತಂಡದ ಮುದ್ರಾರಾಕ್ಷಸ (ರೂ.1000), 2. ನವಸುಮ ರಂಗಮಂಚ ಕೊಡವೂರು ತಂಡದ ಅಗ್ನಿ ಮತ್ತು ಮಳೆ, 3.ಸಮ್ಮತ ಥಿಯೇಟರ್ ತುಮಕೂರು ತಂಡದ ವೌನಿ.
ಶ್ರೇಷ್ಠ ಪ್ರಸಾಧನ:
1.ದೃಶ್ಯಕಾವ್ಯ ಬೆಂಗಳೂರು ತಂಡದ ಸೂರ್ಯಾಸ್ತದಿಂದ ಸೂರ್ಯೋದಯದವರಗೆ (ರೂ.1000),
2. ಸುಮನಸ ಕೊಡವೂರು ತಂಡದ ಮುದ್ರಾರಾಕ್ಷಸ,
3.ಮೈಸೂರು ಜಿಪಿಐಇಆರ್ ರಂಗ ತಂಡದ ಸಿರಿ.
ಶ್ರೇಷ್ಠ ಬೆಳಕು:
1.ನವಸುಮ ರಂಗಮಂಚ ಕೊಡವೂರು ತಂಡದ ಅಗ್ನಿ ಮತ್ತು ಮಳೆ (ರೂ.1000),
2. ದೃಶ್ಯಕಾವ್ಯ ಬೆಂಗಳೂರು ತಂಡದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ,
3.ಮೈಸೂರು ಜಿಪಿಐಇಆರ್ ರಂಗತಂಡದ ಸಿರಿ.
ಹಾಸ್ಯ:
1.ಡ್ರಾಮಾಟ್ರಿಕ್ಸ್ ಬೆಂಗಳೂರು ತಂಡದ ಅರಳಿದ ಗಜಲುಗಳು ನಾಟಕದ ಸಂಶುದ್ದೀನ್ ಪಾತ್ರಧಾರಿ ರಾಘವೇಂದ್ರ
ಮೆಚ್ಚುಗೆ ಬಹುಮಾನ:
1. ಸುಮನಸ ಕೊಡವೂರು ತಂಡದ ಚಾಣಕ್ಯ ಪಾತ್ರಧಾರಿ ಎಂ.ಎಸ್. ಭಟ್
2. ಉದಯ ಕಲಾನಿತೇತನ ಬೆಂಗಳೂರು ತಂಡದ ಕರ್ಣ ಪಾತ್ರಧಾರಿ ನಿತಿನ್ ಬಸವರಾಜ್.
3.ದೃಶ್ಯಕಾವ್ಯ ಬೆಂಗಳೂರು ತಂಡದ ಮಹತ್ತರಿಕ ಪಾತ್ರಧಾರಿ ರಾಧಿಕ ಬಾರಧ್ವಾಜ್‌ಎಸ್.ವಿ.
4.ಬೆಂಗಳೂರು ಪ್ರವರ ಆರ್ಟ್ಸ್ ಸ್ಟುಡಿಯೊ ತಂಡದ ಬಡೇಮಿಯ ಪಾತ್ರಧಾರಿ ವೆಂಕಟೇಶ ಬಾರಧ್ವಾಜ್.
ರಾಜ್ಯದಾದ್ಯಂತದಿಂದ ಬಂದ ಆಯ್ದ 12 ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಡಾ.ಮಾಧವಿ ಎಸ್. ಭಂಡಾರಿ, ಜಿ.ಪಿ. ಪ್ರಭಾಕರ್, ಶಶಿರಾಜ್ ರಾವ್ ಕಾವೂರು, ಆರ್.ಎಲ್.ಭಟ್ ಹಾಗೂ ಬಿ.ಎಸ್.ರಾಮ್ ಶೆಟ್ಟಿ ತೀರ್ಪುಗಾರರಾಗಿದ್ದರು. ಮುಂದಿನ ಜನವರಿ ಎಂಟರನ್ನು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಕಲಾವಿದರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಉಡುಪಿ ರಂಗಭೂಮಿ ಪ್ರಕಟಣೆ ತಿಳಿಸಿದೆ.
æ.







