Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಯಲಲಿತಾರ ರಹಸ್ಯಗಳನ್ನು ಬಚ್ಚಿಟ್ಟ ಪೋಸ್...

ಜಯಲಲಿತಾರ ರಹಸ್ಯಗಳನ್ನು ಬಚ್ಚಿಟ್ಟ ಪೋಸ್ ಗಾರ್ಡನ್ ನಿವಾಸ

ವಾರ್ತಾಭಾರತಿವಾರ್ತಾಭಾರತಿ6 Dec 2016 9:09 PM IST
share
ಜಯಲಲಿತಾರ ರಹಸ್ಯಗಳನ್ನು ಬಚ್ಚಿಟ್ಟ ಪೋಸ್ ಗಾರ್ಡನ್ ನಿವಾಸ

ಚೆನ್ನೈ, ಡಿ.6:  ಸದಾ ಜನಸಂದಣಿಯಿಂದ ಗಿಜಿಗುಟ್ಟುತ್ತಿದ್ದ ಚೆನ್ನೈನ ಕೆಥೆಡ್ರೆಲ್ ರೋಡ್‌ನಲ್ಲಿ ಇಂದು ವಸ್ತುಶಃ ಸ್ತಬ್ಧವಾಗಿದೆ. ಪ್ರವೇಶದ್ವಾರದಲ್ಲಿರುವ ಪೊಲೀಸ್ ಚೌಕಿಯನ್ನು ಹೊರತುಪಡಿಸಿ ಎರಡೂ ಪಕ್ಕಗಳಲ್ಲಿ ವಿಶಾಲವಾದ ಬಂಗಲೆಗಳ ಹಾಗೂ ಭಾರೀ ಎತ್ತರದ ಅಪಾರ್ಟ್‌ಮೆಂಟ್‌ಳಿಂದ ಆವರಿಸಲ್ಪಟ್ಟಿರುವ ರಸ್ತೆಯಲ್ಲಿ ಇಂದು ಬಿಕೋ ಎನ್ನುತ್ತಿದೆ.

ಈ ರಸ್ತೆಯು, ತಮಿಳುನಾಡಿನ ಅತ.್ಯಂತ ಜನಪ್ರಿಯ ವಿಳಾಸವನ್ನು ಹೊಂದಿರುವ ಬಂಗಲೆ ವೇದನಿಲಂಯನೆಡೆಗೆ ಸಾಗುತ್ತಿದೆ. ಪೋಯೆಸ್ ಗಾರ್ಡನ್ ಪ್ರದೇಶದಲ್ಲಿರುವ ವೇದ ನಿಲಯಂ, ಸೋಮವಾರ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಧಿಕೃತ ನಿವಾಸವಾಗಿದ್ದು, ಅದು ತಮಿಳುನಾಡು ರಾಜಕಾರಣದ ಹಲವಾರು ವಿದ್ಯಮಾನಗಳಿಗೆ ಮೂಕಸಾಕ್ಷಿಯಾಗಿ ನಿಂತಿದೆ. ಕಳೆದ 35 ವರ್ಷಗಳಿಗೂ ಅಧಿಕ ಸಮಯದಿಂದ ವೇದನಿಲಯಂ ( 36, ಪೋಯೆಸ್ ಗಾರ್ಡನ್-60086) ತಮಿಳುನಾಡಿನ ರಾಜಕಾರಣಿಗಳು ಹಾಗೂ ಸಾಮಾನ್ಯ ಜನತೆಯ ಗಮನಸೆಳೆಯುತ್ತಾ ಬಂದಿದೆ. ಜಯಲಲಿತಾ ಅವರ ರೋಚಕ ಬದುಕಿನ ಏಳುಬೀಳುಗಳನ್ನು ಈ ಬಂಗಲೆಯು ಕಂಡಿದೆ. ಅದು ಆಕೆಗೆ ಸಾಂತ್ವನದ ತಾಣವೂ ಆಗಿತ್ತು. ಅಲ್ಲದೆ, ರಹಸ್ಯದ ಭವನವೂ ಹೌದು.

1967ರಲ್ಲಿ ನಿರ್ಮಣವಾದ ಈ ಮನೆಗೆ ತನ್ನ ತಾಯಿ (ವೇದವಲ್ಲಿ ಸಂಧ್ಯಾ)ಯ ಹೆಸರನ್ನೇ ಇಟ್ಟಿದ್ದರು. ಈ ವಿಶಾಲವಾದ ಮನೆಯು ತನ್ನ ತಾಯಿಗೆ ಅರ್ಪಿಸಿದ ಶ್ರದ್ಧಾಂಜಲಿಯಾಗಿತ್ತು. ಜಯಲಲಿತಾರನ್ನು ಅವರ ತಾಯಿಯೇ ಚಲನಚಿತ್ರರಂಗಕ್ಕೆ ಪರಿಚಯಿಸಿದ್ದರು. ತಾಯಿಗೆ ಅಕ್ಕರೆಯ ‘ಅಮ್ಮು’ವಾಗಿದ್ದ ಜಯಾ ತನ್ನ ಲಕ್ಷಾಂತರ ಅಭಿಮಾನಿಗಳಿಗೆ ಅಮ್ಮಾ ಆಗಿ ಬೆಳೆಯುವುದಕ್ಕೆ ವೇದನಿಲಯಂ ಸೂಕ್ತ ರಂಗಸಜ್ಜಿಕೆಯನ್ನು ಒದಗಿಸಿತು ಹಾಗೂ ಆಕೆಯ ಅಸಾಧಾರಣ ರಾಜಕೀಯ ಬೆಳವಣಿಗೆಗೆ ಶಕ್ತಿಕೇಂದ್ರವಾಯಿತು.

ಜಯಲಲಿತಾ ಅವರು ‘ಸಿರುದಾವೂರ್ ಬಂಗಲೆ’ ಎಂಬ ವೈಭವೋಪೇತ ನಿವಾಸದ ಒಡತಿಯೂ ಆಗಿದ್ದಾರೆ. ಅಷ್ಟೇ ಮನೋಹರವಾದ ಕೊಡನಾಡು ಎಸ್ಟೇಟ್ ಎಂಬ ವಿಶಾಲವಾದ ತೋಟದ ಮನೆಯನ್ನೂ ಹೊಂದಿದ್ದಾರೆ. ಆದರೆ ಭಾವಾನಾತ್ಮಕವಾಗಿ ಅವರು ವೇದನಿಲಯಂನ್ನೇ ಹೆಚ್ಚಾಗಿ ಹಚ್ಚಿಕೊಂಡಿದ್ದರು. ಆಕೆ ಭಾವುಕ ಸಂದರ್ಭಗಳಲ್ಲಿ ಸಾಂತ್ವನ ಪಡೆಯಲು ವೇದನಿಲಯಂನ ಮೊರೆಹೋಗುತ್ತಿದ್ದರು. ಅದು ಆಕೆಯ ಪಾಲಿಗೆ ಸುರಕ್ಷಿತವಾದ ತಾಣವಾಗಿತ್ತು.
  
 ಆದರೆ ಈ ವಿಶಾಲವಾದ ಬಂಗಲೆಕಟ್ಟಡದಲ್ಲಿ ಕೆಲವು ಭಾಗಗಳು ಸಂದರ್ಶಕರು ಹಾಗೂ ಅತಿಥಿಗಳಿಗೆ ಮುಕ್ತವಾಗಿದ್ದವು. ಕಟ್ಟಡದ ಹೊರಭಾಗವು ಅತ್ಯಂತ ಆಕರ್ಷಕವಾಗಿದ್ದು ಸುಂದರವಾದ ವಿನ್ಯಾಸಗಳಿಂದ ರಾರಾಜಿಸುತ್ತಿದೆ. ಈಗ ವೇದನಿಲಯಂ ಬಂಗಲೆಯ ಮೂಲೆಮೂಲೆಗಳು ಎಂದಿಗೂ ಮರಳಿ ಬಾರದ ಒಡತಿಗಾಗಿ ರೋದಿಸುತ್ತಿವೆ. ಇಂದಿನಿಂದ ಈ ಮನೆಯು ತಮಿಳುನಾಡಿನ ರಾಜಕೀಯ ಇತಿಹಾಸದ ಒಂದು ಗತಸಾಕ್ಷಿಯಾಗಿ ಉಳಿಯಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X