ಮಸೀದಿ ಧ್ವಂಸ ಆರೋಪಿಗಳ ಬಂಧನಕ್ಕೆ ಇಮಾಮ್ಸ್ ಕೌನ್ಸಿಲ್ ಆಗ್ರಹ

ಬೆಂಗಳೂರು, ಡಿ. 6: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಬೆಂಗಳೂರು ಜಿಲ್ಲಾ ವತಿಯಿಂದ ಬಾಬರೀ ಮಸೀದಿಯ ಪುನರ್ ನಿರ್ಮಾಣ, ಮಸೀದಿ ಧ್ವಂಸಗೊಳಿಸಿರುವ ಆರೋಪಿಗಳ ಬಂಧನ ಹಾಗೂ ಸಾಚಾರ್ ವರದಿ ಜಾರಿಗೆ ಆಗ್ರಹಿಸಿ ಇಂದು ಕಬ್ಬನ್‌ಪೇಟೆಯಲ್ಲಿರುವ ಉರ್ದು ಹಾಲ್‌ನಲ್ಲಿ ಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಟಿ ಜಾಮೀಯಾ ಮಸೀದಿಯ ಇಮಾಮ್‌ಖತೀಬ್ ಮೌಲಾನಾ ಮಕ್ಸೂದ್ ಇಮ್ರಾನ್ ಸಾಹೆಬ್ ವಹಿಸಿದ್ದರು. ಇಮಾಮ್ಸ್ ಕೌನ್ಸಿಲ್‌ನ ಜಿಲ್ಲಾಧ್ಯಕ್ಷ ಮೌಲಾನಾ ಅಂಜದ್ ಅಲ್ ಖಾಸಿಮ್‌ಉದ್ಘಾಟನೆಯನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಡಿ.ಐ.ಇ.ಟಿ. ನಅಧ್ಯಕ್ಷ ಉಮರ್ ಶರೀಫ್, ಮೌಲಾನಾ ಅಲ್ತಾಫ್ ನದ್ವಿ, ಮೌಲಾನಾ ಸೈಯದ್ ಸೈಫುಲ್ಲಾ, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಜಾವೇದ್‌ಆಝಂ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಫಯಾಝ್ ಅಹ್ಮದ್, ಇಮಾನ್ಸ್ ಕೌನ್ಸಿಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ಮೌಲಾನಾ ಝಮೀರ್‌ಅಹ್ಮದ್, ಮೌಲಾನಾ ಝಿಯಾವುಲ್ಲಾ ಭಾಗವಹಿಸಿದ್ದರು.
ಮೌಲಾನಾ ಅಬ್ದುರ್ರಹ್ಮಾನ್ ಸ್ವಾಗತಿಸಿದರು. ಮೌಲಾನಾ ಶಹಾಬುದ್ದೀನ್ ವಂದಿಸಿದರು.
ಸಭೆಯಲ್ಲಿ ಬಾಬರೀ ಮಸೀದಿಯನ್ನು ಅದೇ ಜಾಗದಲ್ಲಿ ಪುನರ್ ನಿರ್ಮಿಸಬೇಕು. ಮಸೀದಿ ಧ್ವಂಸಗೊಳಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಮತ್ತು ಲಿಬರ್ಹಾನ್ ಆಯೋಗದ ವರದಿಯನ್ನು ಕಾರ್ಯಗತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಯನ್ನು ರಾಷ್ಟ್ರಪತಿಯವರಿಗೆ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನಾಯಾಧೀಶರಿಗೆ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು.







