ಬಿಜೆಪಿ ಮುಖಂಡನ ಬಳಿ 2000 ರೂ. ನೋಟುಗಳಲ್ಲಿ 33 ಲಕ್ಷ ರೂ. ಪತ್ತೆ, ಬಂಧನ

ಹೊಸದಿಲ್ಲಿ,ಡಿ.6: 2016ರಲ್ಲಿ ರಾಣಿಗಂಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಪ.ಬಂಗಾಲದ ಬಿಜೆಪಿ ನಾಯಕ ಮನೀಷ್ ಶರ್ಮಾರನ್ನು ಅಕ್ರಮ ಹಣ ವಹಿವಾಟಿನ ಆರೋಪದಲ್ಲಿ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಯು ಇಂದು ಕೋಲ್ಕತಾದಲ್ಲಿ ಬಂಧಿಸಿದೆ. ಅವರ ಬಳಿಯಿಂದ 33 ಲ.ರೂ.ಗಳ 2,000 ರೂ.ಗಳ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲ್ಲಿದ್ದಲು ಮಾಫಿಯಾದ ಹಲವು ಶಂಕಿತ ವ್ಯಕ್ತಿಗಳನ್ನೂ ಎಸ್‌ಟಿಎಫ್ ವಶಕ್ಕೆ ತೆಗೆದುಕೊಂಡಿದೆ.
Next Story





