ಮನೆಯಲ್ಲಿ ಕಳವು ಸಾವಿರಾರು ರೂ. ಮೌಲ್ಯದ ನಗ-ನಗದು ಲೂಟಿ
ಭಟ್ಕಳ, ಡಿ.6: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯಲ್ಲಿದ್ದ ಬಟ್ಟೆಬರೆ, ಚಿನ್ನಾಭರಣ ಸೇರಿದಂತೆ ಸುಮಾರು 17 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಲೂಟಿಮಾಡಿ ಪರಾರಿಯಾಗಿರುವ ಘಟನೆ ನಗರ ಠಾಣಾ ವ್ಯಾಪ್ತಿಯ ನಾಗಪ್ಪ ನಾಯ್ಕ ರಸ್ತೆಯ ರಜನಿ ಮಾದೇವ ಭಟ್‌ಎಂಬವರ ಮನೆಯಲ್ಲಿ ನಡೆದಿದೆ
ರಂಜನಿ ಮಾದೇವ ಅವರ ಮನೆಯ ಪಕ್ಕದಲ್ಲೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಲಕರಣೆಗಳನ್ನು ಬಳಸಿ ಮನೆಯಲ್ಲಿ ಯಾರೂ ಇಲ್ಲದ ರಾತ್ರಿ ವೇಳೆ ಮನೆಯ ಮುಂದಿನ ಬಾಗಿಲನ್ನು ಪಿಕ್ಕಾಸಿನಿಂದ ಒಡೆದು ಹಾಕಿ ಮನೆಯಲ್ಲಿದ್ದ ನಗದು ಸೇರಿದಂತೆ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಮನೆಯ ಮಾಲಕ ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಯವರೆಲ್ಲ ಆಸ್ಪತ್ರೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಒಟ್ಟು ಮನೆಯಲ್ಲಿ 17ಸಾವಿರ ರೂ. ಮೌಲ್ಯದ ಸೊತ್ತು ಕಳ್ಳತನವಾಗಿದ್ದು,ಅದರಲ್ಲಿ ಚಿನ್ನದ ಒಂದು ಉಂಗುರ, ಎರಡು ಕಿವಿ ಓಲೆ, ಒಂದು ಮೂಗಿನ ಬೊಟ್ಟು, 8,000 ರೂ. ನಗದು ಹಾಗೂ 12 ಪ್ಯಾಂಟ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕಳ್ಳತನ ಗೈದ ಎರಡು ಬ್ಯಾಗ್ ಹಾಗೂ ಮನೆಯವರು 5 ರೂಪಾಯಿಗಳ ನಾಣ್ಯ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲವನ್ನು ಮನೆಯ ಮುಂಭಾಗದಲ್ಲಿ ಬಿಟ್ಟು ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಭಟ್ಕಳ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







