ಮಂಗಳೂರಿನಲ್ಲಿ ಸಮಾಜವಾದಿ ಪಕ್ಷದ ಕಚೇರಿ ಉದ್ಘಾಟನೆ

ಸುರತ್ಕಲ್, ಡಿ.6: ಸಮಾಜವಾದಿ ಪಕ್ಷದ ಮುಖ್ಯ ಕಚೇರಿ ಮಂಗಳೂರಿನಲ್ಲಿ ಜ.8 ರಂದು ಉದ್ಘಾಟನೆಗೊಳ್ಳಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ. ಮುಹಮ್ಮದ್ ಅಯಾಝ್ ಮುಲ್ಕಿ ತಿಳಿಸಿದ್ದಾರೆ.
ಇಂದು ಸುರತ್ಕಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರಿನ ಜ್ಯೋತಿ ವೃತ್ತದ ಬಳಿಯ ಸ್ಮಾರ್ಟ್ ಟವರ್‌ನ ಒಂದನೇ ಮಹಡಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯ ಕಚೇರಿ ಕಾರ್ಯಾರಂಭಿಸಲಿದೆ ಎಂದರು.
ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯೂಸ್, ಉಪಾಧ್ಯಕ್ಷ ಮಂಜಪ್ಪ, ಶಿವಮೊಗ್ಗ ಜಿಲ್ಲಾಧ್ಯಕ್ಷ ಅನಿಲ್, ಪ್ರಧಾನ ಕಾರ್ಯದರ್ಶಿ ಆಲಿಬಾಬಾ, ಪಕ್ಷದ ಮುಖಂಡರು, ಹಿತೈಶಿಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದ.ಕ.ದಿಂದ ಪಕ್ಷ ಸಂಘಟನೆಗೆ ಹೆಚ್ಚಿ ಪ್ರಾಮುಖ್ಯತೆಯ ನೀಡುವ ಜೊತೆಗೆ ಪಕ್ಷವನ್ನು ತಳ ಮಟ್ಟದಿಂದಲೇ ಸಂಘಟಿಸುವ ಕಾರ್ಯ ನಡೆಯಲಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಅಖಾಡಕ್ಕೆ ಪಾದಾರ್ಪಣೆ ಮಾಡಲಿದ್ದೇವೆ ಎಂದರು.
ಬಳಿಕ ಉಡುಪಿ, ಚಿಕ್ಕಮಗಳೂರು, ಕೊಡಗು ಪ್ರದೆಶಗಳಿಗೆ ಪಕ್ಷವನ್ನು ವಿಸ್ತರಿಸಲಾಗುವುದು ಎಂದ ಅಯಾಝ್, ಈ ಭಾಗದ ಬಲಿಷ್ಠ ಪಕ್ಷಗಳೆಂದು ಹೇಳಿಕೊಳ್ಳುತ್ತಿರುವ ಪಕ್ಷಗಳ ಕೆಲವರನ್ನು ಭೇಟಿಯಾಗಿದ್ದು, ಅವರೂ ಮುಂದಿನ ದಿನಗಳಲ್ಲಿ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಳ್ಳಲಿದ್ದಾರೆ ಎಂದರು.
ಈಗಾಗಲೇ ಜನಪರ ಕಾರ್ಯಕ್ರಮಗಳನ್ನು ಜಿಲ್ಲೆಯಧ್ಯಂತ ಹಮ್ಮಿಕೊಳ್ಳುವ ರೂಪುರೇಷೆಗಳನ್ನು ತಯಾರಿಸಲಾಗಿದೆ. ಕಚೇರಿ ಉದ್ಘಾಟನೆಯ ಬಳಿಕ ಎಲ್ಲಾ ಕಾರ್ಯಕ್ರಮಗಳನ್ನು ಕಾಯ್ರೂಪಕ್ಕೆ ತರಲಾಗುವುದು ಎಂದರು.
ಕಚೇರಿ ಉದ್ಘಾಟನೆಯಂದು ಕಂಕನಾಡಿಯಿಂದ ನೂತನ ಕಚೇರಿಯ ವರೆಗೆ ಜಾಥಾ ನಡೆಸುವ ಕಾರ್ಯಕ್ರಮವಿತ್ತು. ಆದರೆ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅತಿಯಾದ ಸಂಭ್ರಮಗಳನ್ನು ನಡೆಸದೆ, ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಇಮ್ರಾನ್, ಜಿಲ್ಲಾ ಕಾರ್ಯದರ್ಶೀ ಸುದರ್ಶನ್, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನವೀನ್, ಸಮಾಜ ಸೇವಕ ಮೋನು ಉಪಸ್ಥಿತರಿದ್ದರು.







