Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಲವು ಅಚ್ಚರಿಗಳ ನಾಯಕಿ ಜಯಲಲಿತಾ

ಹಲವು ಅಚ್ಚರಿಗಳ ನಾಯಕಿ ಜಯಲಲಿತಾ

ವಾರ್ತಾಭಾರತಿವಾರ್ತಾಭಾರತಿ6 Dec 2016 11:26 PM IST
share
ಹಲವು ಅಚ್ಚರಿಗಳ ನಾಯಕಿ ಜಯಲಲಿತಾ

 ಚಲನಚಿತ್ರ ನಟಿಯಾಗಿ, ಮುಖ್ಯಮಂತ್ರಿಯಾಗಿ ತಮಿಳುನಾಡು ರಾಜಕಾರಣದಲ್ಲಿ ತನ್ನದೇ ಆದ ವರ್ಚಸ್ಸನ್ನು ಸ್ಥಾಪಿಸಿದ್ದ ಜಯಲಲಿತಾ ಬಗ್ಗೆ ನಿಮಗೆ ತಿಳಿದಿರದ ಕೆಲವು ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

 ತಮಿಳುನಾಡು ವಿಧಾನಸಭೆಯ ಪ್ರಪ್ರಥಮ ಪ್ರತಿಪಕ್ಷ ನಾಯಕಿ

ಎಂಜಿಆರ್ ನಿಧನದ ಬಳಿಕ ಜಯಲಲಿತಾ ಏಕಾಂಗಿ ಯಾಗಿಯೇ ಪಕ್ಷದ ನಾಯಕತ್ವವನ್ನು ನಿರ್ವಹಿಸಿದರು. 1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಕೆಯ ನೇತೃತ್ವದಲ್ಲಿ ಎಡಿಎಂಕೆ ಪಕ್ಷವು 27 ಸ್ಥಾನಗಳನ್ನು ಗೆದ್ದಿತು. ತಮಿಳುನಾಡು ವಿಧಾನಸಭೆಗೆ ಪ್ರಪ್ರಥಮ ಮಹಿಳಾ ಪ್ರತಿಪಕ್ಷ ನಾಯಕಿಯಾಗಿ ಆಕೆ ಆಯ್ಕೆಯಾದರು.


1 ರೂ. ವೇತನ

 ಮುಖ್ಯಮಂತ್ರಿಯಾಗಿ ತನ್ನ ಮೊದಲ ಅಧಿಕಾರಾವಧಿಯಲ್ಲಿ ಜಯಲಲಿತಾ ಅವರು ತನ್ನಲ್ಲಿ ಹೇರಳವಾದ ಆದಾಯ ಮೂಲಗಳಿರುವುದಾಗಿ ಹೇಳಿಕೊಂಡು, ವೇತನದ ಚೆಕ್ ಪಡೆಯಲು ನಿರಾಕರಿಸಿದರು. ಸಾರ್ವಜನಿಕ ಉದ್ಯೋಗಿಯಾಗಿ ಆಕೆ ಕೇವಲ 1 ರೂ. ವೇತನವನ್ನು ಸ್ವೀಕರಿಸುತ್ತಿದ್ದರು.

ಸತತ ಎರಡನೆ ಬಾರಿಗೆ ಮುಖ್ಯಮಂತ್ರಿ

2016ರಲ್ಲಿ ಮುಖ್ಯಮಂತ್ರಿಯಾಗಿ ಸತತ ಎರಡನೆ ಅವಧಿಗೆ ಜಯಲಲಿತಾ ಪುನರಾಯ್ಕೆಗೊಳ್ಳುವ ಮೂಲಕ ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಹೊಸ ಮೈಲುಗಲ್ಲನ್ನು ಸ್ಥಾಪಿಸಿದರು.

ಸವಾಲನ್ನು ಎದುರಿಸಿ ಗೆದ್ದ ದಿಟ್ಟೆ

 ಜಯಲಲಿತಾ ತನ್ನ ರಾಜಕೀಯ ಜೀವನದುದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸಿದರೂ ಅವುಗಳನ್ನು ಸಮರ್ಥವಾಗಿ ಬದಿಗೆ ಸರಿಸಿ, ತಾನೋರ್ವ ದಿಟ್ಟ ನಾಯಕಿಯೆಂಬುದನ್ನು ಸಾಬೀತುಪಡಿಸಿದ್ದರು.
ತನ್ನ ರಾಜಕೀಯ ಬದುಕಿನಲ್ಲಿ ಎದುರಾದ ಅಡೆತಡೆಗಳನ್ನು ಹೇಗೆ ನಿವಾರಿಸಿದರೆಂಬುದನ್ನು ಕೆಲವು ನಿದರ್ಶನಗಳ ಮೂಲಕ ನೋಡಬಹುದು.

 ಎದುರಾದ ಮೊದಲ ಅಡೆತಡೆ

 1987ರಲ್ಲಿ ಎಂಜಿಆರ್ ನಿಧನದ ಬಳಿಕ ಎಡಿಎಂಕೆ ಪಕ್ಷವು ಎರಡು ಶಿಬಿರಗಳಾಗಿ ವಿಭಜನೆಗೊಂಡಿತು. ಮೊದಲನೆ ಬಣವು ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಅವರನ್ನು ಬೆಂಬಲಿಸಿದರೆ, ಇನ್ನೊಂದು ಬಣವು ಜಯಲಲಿತಾ ಅವರನ್ನು ಬೆಂಬಲಿಸಿತ್ತು.
 132 ಎಡಿಎಂಕೆ ಶಾಸಕರ ಪೈಕಿ 97 ಮಂದಿಯ ಬೆಂಬಲದೊಂದಿಗೆ ಜಾನಕಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ಆದಾಗ್ಯೂ, ಕೇಂದ್ರದಲ್ಲಿದ್ದ ರಾಜೀವ್‌ಗಾಂಧಿ ಸರಕಾರವು ಎಡಿಎಂಕೆ ಸರಕಾರವನ್ನು ವಜಾಗೊಳಿಸಿ, ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ್ದರಿಂದ ಜಾನಕಿ ಆಳ್ವಿಕೆಯು 21 ದಿನಗಳಲ್ಲೇ ಕೊನೆಗೊಂಡಿತು.

ಅಮ್ಮಾ ರಿಟರ್ನ್ಸ್

 ತನಗುಂಟಾದ ಈ ದೊಡ್ಡ ಹಿನ್ನಡೆಯನ್ನು ಜಯಲಲಿತಾ ಮೀರಿ ನಿಲ್ಲುವಲ್ಲಿ ಯಶಸ್ವಿಯಾದರು.

 1989ರಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಕೆ 27 ಸ್ಥಾನಗಳಲ್ಲಿ ಗೆಲುವು ಸಾಧಿಸಿದರು. ತಮಿಳುನಾಡು ವಿಧಾನಸಭೆಯ ಪ್ರಪ್ರಥಮ ಪ್ರತಿಪಕ್ಷ ನಾಯಕಿಯಾಗಿ ಆಕೆ ಆಯ್ಕೆಯಾದರು. ಕೇವಲ ಎರಡು ಸ್ಥಾನಗಳಲ್ಲಿ ಜಯಗಳಿಸಿದ ಜಾನಕಿ, ಪಕ್ಷವನ್ನು ತೊರೆಯಲು ನಿರ್ಧರಿಸಿದರು.

ಮಾರ್ಚ್ 25,1989

  ಇದು ತಮಿಳುನಾಡಿನ ರಾಜಕೀಯದ ಭವಿಷ್ಯವನ್ನೇ ಬದಲಾಯಿಸಿದ ದಿನವಾಗಿತ್ತು. ಮುಖ್ಯಮಂತ್ರಿ ಕರುಣಾನಿಧಿಯವರ ಬಜೆಟ್ ಭಾಷಣಕ್ಕೆ ಅಡ್ಡಿಪಡಿಸಲು ಜಯಲಲಿತಾ ಯತ್ನಿಸುತ್ತಿದ್ದರು. ಇದರಿಂದ ಕ್ರುದ್ಧರಾದ ಕರುಣಾನಿಧಿ ಜಯಲಲಿತಾ ವಿರುದ್ಧ ನಿಂದನೆಗಳ ಸುರಿಮಳೆಗೈದರು. ಆಗ ಎರಡೂ ಪಕ್ಷಗಳ ಶಾಸಕರ ನಡುವೆ ಜಟಾಪಟಿಯೇರ್ಪಟ್ಟಿತು. ಈ ಸಂದರ್ಭದಲ್ಲಿ ಜಯಾ ತನ್ನ ಪಕ್ಷದ ಸದಸ್ಯರೊಂದಿಗೆ ಸಭಾತ್ಯಾಗ ಮಾಡಲು ಯತ್ನಿಸಿದಾಗ ಡಿಎಂಕೆ ಸಚಿವರೊಬ್ಬರು ಜಯಾ ಅವರ ಸೀರೆಯನ್ನು ಎಳೆಯಲು ಯತ್ನಿಸಿದರು.
 ಇದರಿಂದ ಅವಮಾನಿತರಾದ ಜಯಾ ರೋದಿಸುತ್ತಾ, ತಾನು ಮುಖ್ಯಮಂತ್ರಿಯಾದ ಬಳಿಕವೇ ಸದನಕ್ಕೆ ಮರಳುವುದಾಗಿ ಶಪಥಗೈದರು. ಅಂದು ವಿಧಾನಸಭೆಯಿಂದ ನಿರ್ಗಮಿಸಿದವರು ಮತ್ತೆ ಅವರು ಮುಖ್ಯಮಂತ್ರಿಯಾಗಿ ಪುನರಾಗಮಿಸಿದರು.

ಅಮ್ಮಾ ಜಯಭೇರಿ

1991ರ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿತು.
 ಮೈತ್ರಿಕೂಟವು 234 ಸ್ಥಾನಗಳ ಪೈಕಿ 225 ಸ್ಥಾನಗಳನ್ನು ಗೆಲ್ಲುವುದರೊಂದಿಗೆ, ಜಯಲಲಿತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಮೊದಲ ಅವಧಿಯಲ್ಲೇ ಹಲವು ಪ್ರಕರಣಗಳ ತೊಡಕು

  ಆಕೆಯ ಮೊದಲ ಅವಧಿಯು ಸುಗಮ ಹಾದಿಯಾಗಿರಲಿಲ್ಲ. ತನ್ನ ದತ್ತುಪುತ್ರ ಸುಧಾಕರನ್‌ನ ಅದ್ದೂರಿ ವಿವಾಹಕ್ಕಾಗಿ ಅವರು ವಿವಾದದಲ್ಲಿ ಸಿಲುಕಿಕೊಂಡರು. ಭೂಹಗರಣ ಹಾಗೂ ಗ್ರಾನೈಟ್ ಗಣಿ ಲೀಸ್‌ನಲ್ಲಿ ಅವ್ಯವಹಾರ ಮತ್ತಿತರ ಭ್ರಷ್ಟಾಚಾರ ಪ್ರಕರಣಗಳು ಜಯಾರನ್ನು ಬೆಂಬಿಡದೆ ಕಾಡಿದವು.

ಜೈಲು ಪ್ರವೇಶ

ಭ್ರಷ್ಟಾಚಾರ ಆರೋಪಗಳ ಸುಳಿಯಲ್ಲಿ ಸಿಲುಕಿದ ಜಯಲಲಿತಾಗೆ 1996ರ ವಿಧಾನಸಭಾ ಚುನಾವಣೆಯು ಹೀನಾಯ ಸೋಲನ್ನುಣಿಸಿತು. ಆಕೆಯ ನೇತೃತ್ವದಲ್ಲಿ ಎಡಿಎಂಕೆ ಪಕ್ಷವು ಕೇವಲ 4 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಯತು.

ಅದೇ ವರ್ಷದ ಡಿಸೆಂಬರ್‌ನಲ್ಲಿ ಸುಬ್ರಮಣ್ಯನ್ ಸ್ವಾಮಿ ಅವರು ಜಯಾ ವಿರುದ್ಧ 66.65 ಕೋಟಿ ಮೊತ್ತದ ಅಕ್ರಮ ಆಸ್ತಿ ಗಳಿಕೆಯ ಆರೋಪ ಹೊರಿಸಿದ ಪರಿಣಾಮವಾಗಿ ಆಕೆ ಒಂದು ತಿಂಗಳು ಜೈಲುವಾಸ ಅನುಭವಿಸಬೇಕಾಯಿತು.

2001ರಲ್ಲಿ ಮತ್ತೆ ಅಧಿಕಾರಕ್ಕೇರಿದ ಅಮ್ಮಾ

 2001ರ ವಿಧಾನಸಭಾ ಚುನಾವಣೆಯಲ್ಲಿ ಎಡಿಎಂಕೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತು. ಭ್ರಷ್ಟಾಚಾರ ಆರೋಪದಲ್ಲಿ ಜೈಲುವಾಸ ಅನುಭವಿಸಿದ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಜಯಲಲಿತಾಗೆ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಪಕ್ಷದ ಶಾಸಕರು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೂ, ಸುಪ್ರೀಂಕೋರ್ಟ್ ಅವರ ನೇಮಕವನ್ನು ನಿಷೇಧಿಸಿತು.
 2003ರಲ್ಲಿ ಮದ್ರಾಸ್ ಹೈಕೋರ್ಟ್ ಆಕೆಯನ್ನು ಕೆಲವು ಆರೋಪಗಳಿಂದ ದೋಷಮುಕ್ತಗೊಳಿಸಿದ್ದರಿಂದ ಆಕೆ ಎರಡನೆ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿದರು.

ಖಾತೆಯಿಲ್ಲದ ಮುಖ್ಯಮಂತ್ರಿ

ಇತ್ತೀಚೆಗೆ ಜಯಲಲಿತಾ ಯಾವುದೇ ಖಾತೆಯನ್ನು ಹೊಂದಿರದ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು. ಅವರು ಈ ಮೊದಲು ಹೊಂದಿದ್ದ ಎಲ್ಲಾ ಖಾತೆಗಳನ್ನು ಪನ್ನೀರ್‌ಸೆಲ್ವಂ ನಿರ್ವಹಿಸುತ್ತಿದ್ದರು.

1984ರಲ್ಲಿ ಆರಂಭಗೊಂಡ ರಾಜಕೀಯ ಬದುಕು

ಜನಪ್ರಿಯ ನಟಿಯಾಗಿ ಎರಡು ದಶಕಗಳಿಗೂ ಅಧಿಕ ಕಾಲ ಬೆಳ್ಳಿತೆರೆಯಲ್ಲಿ ರಾರಾಜಿಸಿದ ಜಯಲಲಿತಾ 1982ರಲ್ಲಿ ಎಂ.ಜಿ.ರಾಮಚಂದ್ರನ್ ಮಾರ್ಗದರ್ಶನದಲ್ಲಿ ಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ತನ್ನ ರಾಜಕೀಯ ಬದುಕನ್ನು ಆರಂಭಿಸಿದರು.

  1984ರಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಆಕೆ ನೇಮಕಗೊಂಡರು ಆ ವರ್ಷವೇ ಎಂಜಿಆರ್, ಅಸ್ವಸ್ಥರಾಗಿ ಅಮೆರಿಕದ ಆಸ್ಪತ್ರೆಯೊಂದರಲ್ಲಿ ದಾಖಲಾದರು. ಎಂಜಿಆರ್ ಅನುಪಸ್ಥಿತಿಯಲ್ಲಿ ಜಯಲಲಿತಾ ಅವರನ್ನು ಪಕ್ಶದ ವಿವಿಧ ಹುದ್ದೆಗಳಿಂದ ಕಿತ್ತುಹಾಕಲಾಯಿತು. ಆದಾಗ್ಯೂ ಆಕೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಗೆಲ್ಲುವಲ್ಲಿ ಸಫಲರಾದರು.

ದತ್ತು ಪುತ್ರನ ಮದುವೆ: ಜಯಾ ಗಿನ್ನೆಸ್ ದಾಖಲೆ

1995ರಲ್ಲಿ ತನ್ನ ದತ್ತುಪುತ್ರ ಸುಧಾಕರನ್‌ನ ಅದ್ದ್ದೂರಿ ಮದುವೆಗಾಗಿ ಜಯಲಲಿತಾ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದರು. ಈ ಮದುವೆಗೆ ಬರೋಬ್ಬರಿ 1.50 ಲಕ್ಷ ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿದ್ದು ಇದು ವಿಶ್ವದಾಖಲೆಯೆಂದು ಗಿನ್ನೆಸ್ ಬುಕ್ ರೆಕಾರ್ಡ್ ಉಲ್ಲೇಖಿಸಿದೆ. ಈ ಮದುವೆಗೆ ಕನಿಷ್ಠ 10 ಕೋಟಿ ರೂ. ವೆಚ್ಚವಾಗಿತ್ತೆಂದು ಆದಾಯ ತೆರಿಗೆ ಇಲಾಖೆ ಅಂದಾಜಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X