ಪಟ್ಟೋರಿ: ಯು.ಟಿ.ಖಾದರ್ ರಿಂದ ನೂತನ ಕಾಂಕ್ರೀಟು ರಸ್ತೆ ಉದ್ಘಾಟನೆ

ಕೊಣಾಜೆ , ಡಿ.6: ಇತಿಹಾಸ ಪ್ರಸಿದ್ದ ಪಟ್ಟೋರಿ ಜುಮ್ಮಾ ಮಸೀದಿ ಹಾಗೂ ಪಟ್ಟೋರಿ ಲಾಡ ಪ್ರದೇಶಗಳಿಗೆ ಸಮರ್ಪಕವಾದ ಸಂಪರ್ಕ ರಸ್ತೆ ಇಲ್ಲದ ಕಾರಣ ಹಲವಾರು ವರ್ಷಗಳಿಂದ ಈ ಭಾಗದ ಜನರಿಗೆ ತೊಂದರೆಯಾಗಿತ್ತು. ಇದೀಗ ಈ ಭಾಗದ ಜನರ ಬಹುಕಾಲದ ಬೇಡಿಕೆಯಂತೆ ಜಿಲ್ಲಾಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ಉತ್ತಮವಾದ ಕಾಂಕ್ರೀಟ್‌ರಸ್ತೆ ನಿರ್ಮಾಣಗೊಂಡಿದ್ದು ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಪಟ್ಟೋರಿ ಮಸೀದಿ ಹಾಗೂ ಲಾಡ ಪ್ರದೇಶದ ಸಂಪರ್ಕದ ನೂತನ ಕಾಂಕ್ರೀಟು ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಸಂಪರ್ಕ ರಸ್ತೆಯ ವ್ಯವಸ್ಥೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದು ಜನರ ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ಜನಪ್ರತಿನಿಧಿಗಳ ಜವಬ್ಧಾರಿ ಹೆಚ್ಚು ಇದ್ದು, ಆಯಾ ಪ್ರದೇಶದ ಜನರ ಸಹಕಾರ ಹಾಗೂ ಸಹಭಾಗಿತ್ವವೂ ಬಹಳ ಅಗತ್ಯವಾಗಿದೆ. ಜನರಸಹಕಾರದಿಂದಯಾವುದೇಕಾಮಗಾರಿಯುಸಮರ್ಪಕವಾಗಿಜಾರಿಯಾಗಲುಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯರಾದ ಹೈದರ್ ಕೈರಂಗಳ, ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಪಟ್ಟೋರಿ ಮಸೀದಿ ಅಧ್ಯಕ್ಷ ಸೂಫಿಕುಂಞಿ ಹಾಜಿ, ಸ್ಥಳೀಯರಾದ ಗೋಪಾಲ ಬಂಗೇರ, ಜನಾರ್ದನ ಕುಲಾಲ್, ಕಾಂಗ್ರೆಸ್ ಮುಖಂಡರಾದ ನಾಸೀರ್ ನಡುಪದವು, ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಸ್ಥಳೀಯರಾದ ಸಿ.ಎಂ.ಶೆರೀಫ್ ಪಟ್ಟೋರಿ, ಇಬ್ರಾಹಿಂ ಹಾಜಿ ನಡುಪದವು, ಟಿ.ಆರ್.ಖಾದರ್ ಹಾಜಿ ನಡುಪದವು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.







