ಕರಾಟೆ: ಅಶ್ವಿನಿ ಚಂದ್ರಾಗೆ 4 ಚಿನ್ನದ ಪದಕ

ಮೂಡಿಗೆರೆ, ಡಿ.6: ಇತ್ತೀಚೆಗೆ ಹಾಸನದ ಗುರು ಭವನದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅಶ್ವಿನಿ ಚಂದ್ರ ವೈಯಕ್ತಿಕ ಕಟಾ, ಗ್ರೂಪ್ ಕಟಾ, ವೈಯಕ್ತಿಕ ವೆಪನ್ ಕಟಾ, ಗ್ರೂಪ್ ವೆಪನ್ ಕಟಾ ಎಂಬ 4 ವಿಭಾಗಗಳಲ್ಲಿ ಸ್ಪರ್ಧಿಸಿ 4 ಚಿನ್ನದ ಪದಕಗಳನ್ನು ಪಡೆದಿದ್ದಾಳೆ.
ಮೂಡಿಗೆರೆ ಬೆಥನಿ ಶಾಲೆಯ ಒಂದನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ವಿನಿ ಚಂದ್ರ ಕರಾಟೆ ಮುಖ್ಯ ಶಿಕ್ಷಕಿ ಲತಾ ಚಂದ್ರು ಹಾಗೂ ಚಂದ್ರು ಅವರ ಪುತ್ರಿಯಾಗಿದ್ದು, ಶಾಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಅದೇ ರೀತಿ ಕರಾಟೆ ಮುಖ್ಯ ಶಿಕ್ಷಕ ಪೂಜಿತ್ ರಾಜೇಂದ್ರನ್ ಇವರು ಬ್ಲಾಕ್ ಬೆಲ್ಟ್ ವಿಭಾಗದ ವೈಯಕ್ತಿಕ ಕಟಾ ಮತ್ತು ವೈಯಕ್ತಿಕ ವೆಪನ್ ಕಟಾ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ.
Next Story





