ಚೈತ್ಯ ಭೂಮಿಯಲ್ಲಿ ಅಂಬೇಡ್ಕರ್‌ಗೆ ಪುಷ್ಪಾಂಜಲಿ
60ನೆ ಪರಿನಿಬ್ಬಾಣ ದಿನ
ಮುಂಬೈ, ಡಿ.6: ಡಾ.ಬಿ.ಆರ್.ಅಂಬೇಡ್ಕರರ 60ನೆ ಪರಿನಿಬ್ಬಾಣ ದಿನವಾದ ಇಂದು ಇಲ್ಲಿನ ದಾದರ್ ಶಿವಾಜಿ ಪಾರ್ಕ್ ಸಮೀಪದ ಅವರ ಸ್ಮಾರಕ ‘ಚೈತ್ಯ ಭೂಮಿ’ಗೆ ರಾಜ್ಯಾದ್ಯಂತದ ಸಾವಿರಾರು ಅನುಯಾಯಿಗಳು ಆಗಮಿಸಿ ಸಂವಿಧಾನ ಶಿಲ್ಪಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಶಿಕ್ಷಣ ಸಚಿವ ವಿನೋದ್ ತಾವಡೆ ಚೈತ್ಯ ಭೂಮಿಯಲ್ಲಿ ಅಂಬೇಡ್ಕರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ನಾಯಕರಲ್ಲಿ ಸೇರಿದ್ದಾರೆ.
ಮಂತ್ರಾಲಯದಲ್ಲಿ ದಿವಂಗತ ನಾಯಕನಿಗೆ ಪುಷ್ಪನಮನ ಸಲ್ಲಿಸಲಾಯಿತು. ವಿಧಾನ ಭವನದಲ್ಲಿ ಶಾಸಕಾಂಗ ಸಿಬ್ಬಂದಿ ಅಂಬೇಡ್ಕರ್‌ಗೆ ಗೌರವ ಸಲ್ಲಿಸಿದರು.
Next Story





