ಜ.13-15: ಆಳ್ವಾಸ್ ವಿರಾಸತ್-2017

ಮೂಡುಬಿದಿರೆ, ಡಿ.6: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 23ನೆ ವರ್ಷದ ‘ಆಳ್ವಾಸ್ ವಿರಾಸತ್’ ಜ.13ರಿಂದ 15ರವರೆಗೆ ಪುತ್ತಿಗೆ ವಿವೇಕಾನಂದ ನಗರ ದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಭೂಮಿಯ ವೇದಿಕೆಯಲ್ಲಿ ಆಯೋಜಿಸ ಲಾಗಿದೆ. ವಿರಾಸತ್‌ನ ಪೂರ್ವಾರ್ಧದಲ್ಲಿ ಸಂಗೀತವೂ, ಉತ್ತಾರಾರ್ಧದಲ್ಲಿ ನೃತ್ಯವೂ ಸಂಸ್ಕೃತಿಪ್ರಿಯರ ಮನಸೂರೆಗೊಳ್ಳಲಿದೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 10:30ಕ್ಕೆ ಕಾರ್ಯಕ್ರಮಗಳು ನಡೆಯಲಿವೆ. ಜನವರಿ 13ರಂದು ಸಂಜೆ 5:45ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 45 ಸಾವಿರಕ್ಕಿಂತ ಹೆಚ್ಚಿನ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
Next Story





