ಯುವಕ ಆತ್ಮಹತ್ಯೆ
ಬೆಳ್ತಂಗಡಿ, ಡಿ.6: ಯುವಕನೊಬ್ಬ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂದಾರು ಗ್ರಾಮದ ಮೊಗ್ರು ಎಂಬಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಸಾಲ್ಮರ ಸನಿಹದ ಬೀಜದ ಪಲ್ಕೆ ನಿವಾಸಿ ಜಿನ್ನಪ್ಪಗೌಡ ಎಂಬವರ ಪುತ್ರ ರಮೇಶ್(22) ಕೋಣೆಯಲ್ಲಿ ಮೈಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಕಿಯ ಶಾಖಕ್ಕೆ ಅವರು ಬೊಬ್ಬೆ ಹೊಡೆದಿದ್ದು, ಅಕ್ಕಪಕ್ಕದವರು ಬರುವಾಗ ದೇಹದ ಬಹುಭಾಗ ಸುಟ್ಟ ಕಾರಣ ಜೀವನ್ಮರಣ ಸ್ಥಿತಿಯಲ್ಲಿದ್ದ ರಮೇಶ್ ಸಾವನ್ನಪ್ಪಿದ್ದಾರೆ.
Next Story





