ಜೂಜಾಟ: ಆರು ಮಂದಿಯ ಸೆರೆ
ಪಡುಬಿದ್ರೆ, ಡಿ.6: ಪಾದೇಬೆಟ್ಟು ಗ್ರಾಮದ ಶಾಲೆಯ ಬಳಿ ಡಿ.5ರಂದು ಸಂಜೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಕಂಚಿನಡ್ಕದ ಹನುಮಂತಪ್ಪ(28), ಪ್ರಕಾಶ್(45), ಪಡುಬಿದ್ರೆಯ ಬಂಗಾರಿ(23), ಕುಮಾರ್(21), ಎರ್ಮಾಳಿನ ರಮೇಶ(21), ಮಂಜುನಾಥ(25) ಎಂಬವರು ಬಂಧಿತ ಆರೋಪಿಗಳು. ಇವರಿಂದ 2,580 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





