ಮೈಸೂರು ಮೇಯರ್ ಪಟ್ಟ ಜೆಡಿಎಸ್‌ಗೆ

ಮೈಸೂರು, ಡಿ.7: ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಮುಂದುವರಿದಿದ್ದು, ನೂತನ ಮೇಯರ್ ಆಗಿ ಜೆಡಿಎಸ್‌ನ ಎಂ.ಜೆ. ರವಿ ಕುಮಾರ್ ಆಯ್ಕೆಯಾಗಿದ್ದಾರೆ.
ಉಪ ಮೇಯರ್ ಆಗಿ ಬಿಜೆಪಿಯ ಅಭ್ಯರ್ಥಿ ರತ್ನ ಲಕ್ಷ್ಮಣ್ ಆಯ್ಕೆಯಾಗಿದ್ದಾರೆ.
ರವಿಕುಮಾರ್ ಮೈಸೂರಿನ 37ನೆ ವಾರ್ಡ್‌ನ ಸದಸ್ಯರಾಗಿದ್ದಾರೆ. ರತ್ನ ಲಕ್ಷ್ಮಣ್ 48ನೆ ವಾರ್ಡ್‌ನ ಸದಸ್ಯೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸೋತಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿಯು ಸತತ ನಾಲ್ಕನೆ ಬಾರಿ ಯಶಸ್ವಿಯಾಗಿ ಮುಂದುವರಿದಿದೆ.
Next Story





