ಕಡಬ: ಮೆಸ್ಕಾಂ ಜನ ಸಂಪರ್ಕ ಸಭೆ

ಕಡಬ, ಡಿ.7. ಕಡಬ ಮೆಸ್ಕಾಂ ಉಪವಿಭಾಗ ಮೆಸ್ಕಾಂ ಜನಸಂಪರ್ಕ ನಡೆಯುವ ಬಗ್ಗೆ ಪ್ರಚಾರ ಮಾಡದೆ ಕಾಟಾಚಾರಕ್ಕಾಗಿ ಸಭೆ ನಡೆಸಿದ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆ ಬುಧವಾರ ಕಡಬ ಅನುಗ್ರಹ ಮಿನಿ ಸಭಾಭವನದಲ್ಲಿ ನಡೆಯಿತು.
ಸಭೆ ನಡೆಯುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇರಲ್ಲಿಲ್ಲ ಎಂದು ಸಭೆಗೆ ಹಾಜರಾದ ಜನಪ್ರತಿನಿಧಿಗಳು ದೂರಿದ್ದಾರೆ. ವೇದಿಕೆಯಲ್ಲಿ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ, ಗಣೇಶ್ ಕೈಕುರೆ, ಶ್ರೀಮತಿ ಕುಸುಮಾ ಪಿ.ವೈ, ಮೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ನಾಗಾರ್ಜುನ, ಪುತ್ತೂರು ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಡಿ. ನಾರಾಯಣ ಪೂಜಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಮೆಸ್ಕಾಂ ಎಇ ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕರಾದ ಸೀತಾರಾಮ ಗೌಡ ಪೊಸವಳಿಕೆ, ಎಪಿಎಂಸಿ ಸದಸ್ಯೆ ಶ್ರೀಮತಿ ಶಾಲಿನಿ ಸತೀಶ್, ಗ್ರಾ.ಪಂ.ಸದಸ್ಯರಾದ ಹಾಜಿ ಹನೀಫ್ ಕೆ.ಎಂ., ಶ್ರೀಮತಿ ಶಾರದಾ ಬಿಳಿನೆಲೆ, ಸಲಹಾ ಸಮಿತಿ ಸದಸ್ಯರು ಸೇರಿದಂತೆ ಸಾರ್ವಜನಿಕರು ದೂರುಗಳನ್ನು ವ್ಯಕ್ತಪಡಿಸಿದರು.





