ತಮಿಳು ಚಿತ್ರಸಾಹಿತಿ ವೈರಮುತ್ತು ಆಸ್ಪತ್ರೆಗೆ

ಚೆನ್ನೈ,ಡಿ. 7: ಪ್ರಸಿದ್ಧ ತಮಿಳು ಕವಿ, ಗೀತ ರಚನಾಕಾರ ವೈರಮುತ್ತು ಅನಾರೋಗ್ಯಕ್ಕೀಡಾಗಿದ್ದು. ಚೆನ್ನೈ ಅಪೊಲೊ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.
ವೈರ ಮುತ್ತು ಆರೋಗ್ಯದ ಕುರಿತು ಯಾವುದೇ ಆತಂಕ ಅಗತ್ಯವಿಲ್ಲ ಎಂದು ವೈರಮುತ್ತುಅವರ ಹಿರಿಯ ಪುತ್ರ ಮಾಧವನ್ ಕಾರ್ಕಿ ಹೇಳಿದ್ದಾರೆ."ಪ್ರತಿವರ್ಷವೂ ನಡೆಸಲಾಗುತ್ತಿರುವ ಮೆಡಿಕಲ್ ಚೆಕ್‌ಅಪ್‌ಗೆ ಅವರನ್ನು ಅಪೊಲೊ ಆಸ್ಪತ್ರೆಗೆ ಕರೆತರಲಾಗಿದೆ. ತಂದೆ ಸಂಪೂರ್ಣ ಆರೋಗ್ಯದಿಂದಿದ್ದಾರೆ. ಕೆಲವರು ತಂದೆಯ ಆರೋಗ್ಯದ ಕುರಿತು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆಂದು ಮಾಧವನ್ ತಿಳಿಸಿದರೆಂದು ವರದಿಯಾಗಿದೆ.
Next Story





