2000ರೂ. ನೋಟುಗಳ ಹಾರ ಹಾಕಿ ಬಂದ ಮದುಮಗ: ಜನ ಕಂಗಾಲು

ಶಾಮಲಿ(ಉತ್ತರಪ್ರದೇಶ), ಡಿ. 7: ದೇಶದಲ್ಲಿ ಈಗ ಪರ್ಯಾದಿ ಇಲ್ಲದ ಮದುವೆಗಳ ಕುರಿತು ವರದಿಯಾಗುತ್ತಿದೆ. ಜನರು ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿ ಮುಗಿಸಿಬಿಡುತ್ತಿದ್ದಾರೆ.
ಹೀಗಿರುವಾಗ 2000ರೂಪಾಯಿಯ ನೋಟುಗಳ ಮಾಲೆ ಹಾಕಿಕೊಂಡು ಮದುಮಗ ಬಂದರೆ ಹೇಗಾಗಬಹುದು.
ಹೌದು, ಇಂತಹ ಚಕಿತಗೊಳಿಸುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಶಾಮ್ಲಿ ಜಿಲ್ಲೆಯ ಆದರ್ಶ ಮಂಡಿ ಠಾಣಾ ವ್ಯಾಪ್ತಿಯ ಎಮ್.ಎಸ್. ಫಾರ್ಮ್‌ಗೆ ಮುಝಪ್ಫರ್‌ನಗರದಿಂದ ದಿಬ್ಬಣದಲ್ಲಿ ಬಂದ ಮದುಮಗನ ಕೊರಳಲ್ಲಿ ಎರಡು ಲಕ್ಷ ರೂಪಾಯಿಯ ನೋಟುಗಳ ಮಾಲೆ ಇತ್ತು. ಆದ್ದರಿಂದ ಜನರು ಮದುಮಗನನ್ನು ಆಶ್ಚರ್ಯದಿಂದ ನೋಡತೊಡಗಿದ್ದರು. 2000ರೂಪಾಯಿಯ ಎರಡು ಲಕ್ಷರೂಪಾಯಿ ನೋಟಿನ ಮಾಲೆ ಅವನ ಕೊರಳಲ್ಲಿ ಕಂಗೊಳಿಸುತ್ತಿತ್ತು. ಇದನ್ನು ನೋಡಿದ ಜನರ ನಡುವೆ ತರಹ ತರಹದ ಪ್ರಶ್ನೆ ಹುಟ್ಟಿಕೊಂಡಿದೆ. ಇಷ್ಟೊಂದು ಮೊತ್ತದ ಹೊಸ ನೋಟುಗಳು ವರನಿಗೆ ಎಲ್ಲಿಂದ ಸಿಕ್ಕಿದೆ ಎಂದು ಎಲ್ಲರೂ ಚಕಿತಗೊಂಡಿದ್ದರೆಂದು ವರದಿ ತಿಳಿಸಿದೆ.
Next Story





