47 ಮಂದಿಯನ್ನು ಒಯ್ಯುತ್ತಿದ್ದ ವಿಮಾನ ಪತನ

ಇಸ್ಲಾಮಾಬಾದ್, ಡಿ. 7: 47 ಜನರನ್ನು ಹೊತ್ತೊಯ್ಯುತ್ತಿದ್ದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ)ಗೆ ಸೇರಿದ ವಿಮಾನವೊಂದು ದೇಶದ ಉತ್ತರದ ನಗರ ಚಿತ್ರಾಲ್‌ನಲ್ಲಿ ಬುಧವಾರ ಸಂಜೆ ಪತನಗೊಂಡಿದೆ.
ವಿಮಾನವು ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನ ಬಳಿಕ ನಿಯಂತ್ರಣ ಕಚೇರಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂಬುದಾಗಿ ಪಾಕಿಸ್ತಾನಿ ಟಿವಿ ಚಾನೆಲ್‌ಗಳು ವರದಿ ಮಾಡಿವೆ.
ಸಂಜೆ ಸುಮಾರು 4:30ರ ವೇಳೆಗೆ ವಿಮಾನ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿತು ಎಂಬುದಾಗಿ ನಾಗರಿಕ ವಾಯು ಯಾನ ಮೂಲಗಳನ್ನು ಉಲ್ಲೇಖಿಸಿ ‘ಜಿಯೋ ನ್ಯೂಸ್’ ವರದಿ ಮಾಡಿದೆ.
Next Story





