ಮೆಸ್ಕಾಂ ಅಧಿಕಾರಿಯ ನಿಂದನೆ : ಆರೋಪಿಗೆ ಪೊಲೀಸ್ ಎಚ್ಚರಿಕೆ
ಪುತ್ತೂರು, ಡಿ.7 : ವಿದ್ಯುತ್ ವ್ಯತ್ಯಯ ಆಗಿರುವ ಹಿನ್ನಲೆಯಲ್ಲಿ ಬಳಕೆದಾರರೊಬ್ಬರು ಮೆಸ್ಕಾಂ ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ತಾಲ್ಲೂಕಿನ ಬಲ್ನಾಡು ವ್ಯಾಪ್ತಿಯಲ್ಲಿ ವಿದ್ಯುತ್ ದುರಸ್ತಿ ಕಾರ್ಯದ ಹಿನ್ನಲೆಯಲ್ಲಿ ಸೋಮವಾರ ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಯ ಕುರಿತು ಪುತ್ತೂರು ನಗರ ವ್ಯಾಪ್ತಿಯ ಮೆಸ್ಕಾಂ ಜೂನಿಯರ್ ಇಂಜಿನಿಯರ್ ರಾಮಚಂದ್ರ ಅವರಿಗೆ ದೂರವಾಣಿ ಕರೆ ಮಾಡಿದ ಬಲ್ನಾಡು ನಿವಾಸಿ ಪ್ರವೀಣ್ ಎಂಬವರು ಅಧಿಕಾರಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.
ಮೆಸ್ಕಾಂ ಜೆಇ ರಾಮಚಂದ್ರ ಅವರು ಈ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಆರೋಪಿ ಪ್ರವೀಣ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ,ಬಳಿಕ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ.
Next Story





