ಗೃಹರಕ್ಷಕ ದಿನಾಚರಣೆ: ರಕ್ತದಾನ ಶಿಬಿರ

ಮಂಗಳೂರು, ಡಿ.7: ಜಿಲ್ಲಾ ಗೃಹರಕ್ಷಕ ದಳ, ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್, ಲಿಯೋ ಕ್ಲಬ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಗೃಹರಕ್ಷಕ ದಿನಾಚರಣೆ ಪ್ರಯುಕ್ತ ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕ ದಳ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ವೈದ್ಯ ಡಾ.ಎಸ್.ಎಂ.ಶರ್ಮಾ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಲ್ಲಾ ಗೃಹರಕ್ಷಕರನ್ನು ಗೃಹರಕ್ಷಕ ದಿನಾಚರಣೆಯ ದಿನದಂದು ಸ್ಮರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಉಮೇಶ್ ಪ್ರಭು, ಕಾರ್ಯದರ್ಶಿ ಸತೀಶ್ ಪೈ, ಲಯನೆಸ್ ಕ್ಲಬ್‌ನ ಪ್ರತಿಭಾ ಪ್ರಭು, ನಿರ್ದೇಶಕ ಸುಧಾಮ ರೈ, ದಿನಕರ ರೈ ಮುಂತಾದವರು ಉಪಸ್ಥಿತರಿದ್ದು.
ರೆಡ್‌ಕ್ರಾಸ್ ಸಂಸ್ಥೆಯ ರಕ್ತ ನಿಧಿ, ಲೇಡಿ ಘೋಷನ್ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಕಿಯರು ರಕ್ತದಾನ ಶಿಬಿರವನ್ನು ನಡೆಸಿಕೊಟ್ಟರು.
ರಕ್ತನಿಧಿಯ ಎಡ್ವರ್ಡ್ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು.
ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಗೃಹರಕ್ಷಕರ ಭಾಸ್ಕರ್ ವಂದಿಸಿದರು.







