ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸು

ಮೂಡುಬಿದಿರೆ, ಡಿ.7: ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಹಿಮ್ಮುಖ ಚಲಿಸಿ, ರಸ್ತೆ ಬಿಟ್ಟು ಹೊಂಡದಲ್ಲಿ ಹೋಗಿ ನಿಂತು ಸಂಭಾವ್ಯ ಅಪಘಾತವೊಂದು ತಪ್ಪಿದ ಘಟನೆ ಇರುವೈಲು ಬಳಿ ಬುಧವಾರ ನಡೆದಿದೆ.
ಅಪಘಾತಕ್ಕೀಡಾದ ಬಸ್ ಇರುವೈಲಿನ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ್ದಾಗಿದ್ದು, ಎಂದಿನಂತೆ ಬೆಳಿಗ್ಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಇರುವೈಲು ಕಂಬಳಗದ್ದೆ ಎಂಬಲ್ಲಿ ರಸ್ತೆಯ ಏರನ್ನು ಹತ್ತುತ್ತಿದ್ದಾಗ ಅಕಸ್ಮಾತ್ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖ ಚಲಿಸುತ್ತಾ ಬಂದು ರಸ್ತೆ ಬಿಟ್ಟು ಹತ್ತಿರದ ಗುಂಡಿಯಲ್ಲಿ ಬಂದು ನಿಂತಿತ್ತೆನ್ನಲಾಗಿದೆ.
ಬಸ್‌ನಲ್ಲಿ ಸುಮಾರು 40 ಮಕ್ಕಳಿದ್ದರೆನ್ನಲಾಗಿದ್ದು , ಓರ್ವ ವಿದ್ಯಾರ್ಥಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು ಬಿಟ್ಟರೆ, ಉಳಿದೆಲ್ಲ ಮಕ್ಕಳು ಪವಾಡಸದೃಶ ಪಾರಾಗಿದ್ದಾರೆ.
ಬಸ್ಸು ಇನ್ನಷ್ಟು ಹಿಂದಕ್ಕೆ ಬರುತ್ತಿದ್ದರೆ ಕಂದಕಕ್ಕೆ ಬಿದ್ದು ಅನಾಹುತ ಸಂಭವಿಸುತಿತ್ತೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Next Story





