ಆ್ಯಸಿಡ್ ಸೇವಿಸಿ ಮಹಿಳೆಯ ಆತ್ಮಹತ್ಯೆ

ಕಡಬ, ಡಿ.7. ಆ್ಯಸಿಡ್ ಸೇವಿಸಿ ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ರೆಂಜಿಲಾಡಿ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆಗೈದವರನ್ನು ಗೋಳಿಯಡ್ಕ ರೆಂಜಿಲಾಡಿ ನಿವಾಸಿ ಅಣ್ಣಪ್ಪ ಎಂಬವರ ಪತ್ನಿ ರಾಜೇಶ್ವರಿ(38) ಎಂದು ಗುರುತಿಸಲಾಗಿದೆ.
ಬುಧವಾರ ಅಪರಾಹ್ನ ತನ್ನ ಮನೆಯಲ್ಲಿದ್ದ ರಾಜೇಶ್ವರಿಯವರು ಆ್ಯಸಿಡ್ ಸೇವಿಸಿದ್ದು, ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು.
ಮೃತದೇಹವನ್ನು ಪುತ್ತೂರು ಠಾಣೆಯ ಶವಾಗಾರದಲ್ಲಿರಿಸಲಾಗಿದೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





