ಟೈಲರ್ಸ್ ಅಸೋಸಿಯೇಶನ್ ಸಭೆ : ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಡಿ.7: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ಉರ್ವ ವಲಯ ಸಮಿತಿಯ ವಾರ್ಷಿಕ ಸಭೆಯು ಇತ್ತೀಚೆಗೆ ಮಣ್ಣಗುಡ್ಡೆ ಸರಕಾರಿ ಶಾಲೆಯಲ್ಲಿ ಜರಗಿತು.
ವಲಯಾಧ್ಯಕ್ಷ ಶ್ರೀಪತಿ ಕಲಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಾಧ್ಯಕ ವಸಂತ್ ಬಿ., ಉಪಾಧ್ಯಕ್ಷೆ ವಿದ್ಯಾಶೆಟ್ಟಿ, ಜಿಲ್ಲಾಧ್ಯಕ್ಷ ಉದಯ ಕುಮಾರ್, ಜಿಲ್ಲಾ ಕಾರ್ಯದರ್ಶಿ ಜೈ ಶಂಕರ್, ಕ್ಷೇತ್ರಾಧ್ಯಕ್ಷೆ ಸುಜಾತಾ ಜೋಗಿ, ಕಾರ್ಯದರ್ಶಿ ಶೇಖರ್ ಪಡು, ಉರ್ವ ವಲಯ ಕಾರ್ಯದರ್ಶಿ ಶಶಿಕಲಾ ಸುನೀಲ್, ಕೋಶಾಧಿಕಾರಿ ಚಂದ್ರಕಲಾ ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ಶಶಿಕಲಾ ಸುನೀಲ್ ವರದಿ ವಾಚಿಸಿದರು.
ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀಪತಿ ಕಲಂಬಾಡಿ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ:
ಅಸೋಸಿಯೇಶನ್‌ನ ಉರ್ವ ವಲಯದ ಅಧ್ಯಕ್ಷರಾಗಿ ಜಯಪ್ರಕಾಶ್ ಕೊಂಚಾಡಿ, ಕಾರ್ಯದರ್ಶಿಯಾಗಿ ಭವಾನಿಶಂಕರ್, ಕೋಶಾಧಿಕಾರಿಯಾಗಿ ಕವಿತಾ ಉಮೇಶ್ ಹಾಗು ಕಾರ್ಯಕಾರಿ ಸಮಿತಿಗೆ 24 ಮಂದಿಯನ್ನು ಆಯ್ಕೆ ಮಾಡಲಾಯಿತು.
Next Story





