ಬಾಲಕ ನಾಪತ್ತೆ

ಗಂಗೊಳ್ಳಿ, ಡಿ.7: ಅಂಪಾರಿನ ಸಂಜಯಗಾಂಧಿ ಪ್ರೌಢ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡು ಅಂಪಾರಿನ ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ನಲ್ಲಿ ಉಳಕೊಂಡಿದ್ದ ಗಂಗೊಳ್ಳಿ ಸುಗಿಬೈಲ್‌ನ ಚಂದ್ರಕಾಂತ ಖಾರ್ವಿ ಎಂಬವರ ಪುತ್ರ ಅರುಣ ಪೂಜಾರಿ (17) ನ.27ರಿಂದ ನಾಪತ್ತೆಯಾಗಿದ್ದಾನೆ ಎಂದು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ನ.26ರಂದು ಹಾಸ್ಟೆಲ್‌ನಿಂದ ಮನೆಗೆ ಬಂದಿದ್ದ ಅರುಣ ಪೂಜಾರಿ ಮರುದಿನ ಬೆಳಗ್ಗೆ 10:30ಕ್ಕೆ ಗಂಗೊಳ್ಳಿಯ ಮನೆಯಿಂದ ಅಂಪಾರಿಗೆ ಮರಳಿ ಹೋಗಿದ್ದು, ಆದರೆ ಅಲ್ಲಿಂದ ಶಾಲೆಗೂ ಅಥವಾ ಹಾಸ್ಟೆಲ್‌ಗೆ ತೆರಳದೆ, ಮನೆಗೂ ಮರಳದೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





