ಫೈಝಲ್ ಹತ್ಯೆಯ ಎಲ್ಲಾ ಆರೋಪಿಗಳಿಗೆ ಕಾನೂನು ಪ್ರಕಾರ ಕ್ರಮ: ಪಿಣರಾಯಿ

ತಾನೂರ್, ಡಿ. 8: ಕೊಡಿಂಞಿ ಫೈಝಲ್ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸುವ ಮೂಲಕ ಎಲ್ಲ ಆರೋಪಿಗಳನ್ನು ಕಾನೂನಿನ ಮುಂದೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ. ಕ್ಲಿಫ್ ಹೌಸ್‌ನಲ್ಲಿ ತನ್ನನ್ನು ಸಂದರ್ಶಿಸಿದ ತಾನೂರ್ ಶಾಸಕ ವಿ. ಅಬ್ದುರ್ರಹ್ಮಾನ್‌ರ ನೇತೃತ್ವದ ತಂಡಕ್ಕೆ ಮುಖ್ಯಮಂತ್ರಿ ಈ ಭರವಸೆಯನ್ನು ನೀಡಿದ್ದಾರೆ.
ನಾಡಿನ ಸೌಹಾರ್ದ ವಾತಾವರಣವನ್ನು ಹಾನಿಗೊಳಿಸುವ ಯಾವ ಕ್ರಮವನ್ನು ಯಶಸ್ವಿಗೊಳಿಸುಲು ಬಿಡುವುದಿಲ್ಲ. ಪೊಲೀಸ್ ತನಿಖೆಯನ್ನು ದಾರಿತಪ್ಪಿಸಲಾಗುತ್ತಿದೆ ಎಂಬ ದೂರುಗಳ ಸಹಿತ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರೆಂದು ಶಾಶಕ ವಿ ಅಬ್ದುರ್ರಹ್ಮಾನ್ ತಿಳಿಸಿದ್ದಾರೆ. ನಾಡಿನ ಶಾಂತಿ ಕೆಡಿಸುವ ಇಂತಹ ದಾಳಿಗಳಿಗೆ ಸಂಚು ಹೆಣೆದ ಎಲ್ಲರನ್ನೂ ಕಾನೂನಿನ ಮುಂದೆ ತರಬೇಕು. ಪೊಲೀಸರು ಮತ್ತು ಸರಕಾರದ ಮೇಲೆ ಜನರಿಟ್ಟ ವಿಶ್ವಾಸ ಕಾಪಾಡಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಮನವಿಸಲ್ಲಿಸಿದ ನಿಯೋಗ ಮುಖ್ಯಮಂತ್ರಿಯನ್ನು ವಿನಂತಿಸಿದೆ.
ನನ್ನಬ್ರ ಪಂಚಾಯತ್ ಸದಸ್ಯ ಕೆ.ಪಿ. ಹೈದ್ರೋಸ್ ಕೋಯ ತಂಙಳ್, ಪಿ.ಕೆ. ಅಹ್ಮದ್ ಕುಟ್ಟಿ, ಸಲೀಂ ಪುಝಿಕ್ಕ ಲ್, ಪತ್ತೂರ್ ಮೊಯ್ದಿನ್ ಹಾಜಿ,ಸಿ. ಅಬೂಬಕರ್ ನಿಯೋಗದಲ್ಲಿದ್ದರೆಂದು ವರದಿ ತಿಳಿಸಿದೆ.





