ಪಕ್ಷವನ್ನೇ ತಬ್ಬಿಬ್ಬುಗೊಳಿಸಿದ ಶಶಿಕಲಾಳ ಮಧ್ಯರಾತ್ರಿ ಕಾರ್ಯಾಚರಣೆ
ಅಧಿಕಾರ ಹಸ್ತಾಂತರ ಆಗಿದ್ದು ಹೇಗೆ?

ಚೆನ್ನೈ, ಡಿ.8 : ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಮಧ್ಯರಾತ್ರಿ ಕಾರ್ಯಾಚರಣೆ ಮೂಲಕ ಪಕ್ಷವನ್ನೇ ತಬ್ಬಿಬ್ಬುಗೊಳಿಸಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಜಯಲಲಿತಾ ಮೃತಪಟ್ಟಿದ್ದಾರೆಂಬ ಅಧಿಕೃತ ಘೋಷಣೆಯಾಗುವ ಮೊದಲೇ ಮಾಡಿಸಿದ್ದ ರೀತಿ ಇದೀಗ ಬಹಿರಂಗಗೊಳಿಸಿದೆ.
ಎಐಎಡಿಎಂಕೆ ಪಕ್ಷದಲ್ಲಿ ಯಾವುದೇ ಸ್ಥಾನ ಹೊಂದಿಲ್ಲದ, ಕೇವಲ ಜಯಲಲಿತಾ ಅವರ ಬಹಳ ಕಾಲದ ಗೆಳತಿ ಹಾಗೂ ಆಕೆಯೊಂದಿಗೇ ವಾಸಿಸುತ್ತಿದ್ದಾರೆಂಬ ಒಂದೇ ಕಾರಣಕ್ಕೆ ಆಕೆ ಇಷ್ಟೆಲ್ಲಾ ಅಧಿಕಾರ ಚಲಾಯಿಸಿದ್ದಾರೆಂದು ಹೇಳಲಾಗಿದೆ. ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರ ಸಮೀಪವರ್ತಿಯಾಗಿದ್ದವರಲ್ಲದೆ ಶಶಿಕಲಾ ಅವರ ಸಮುದಾಯಕ್ಕೆ ಸೇರಿದವರೆಂಬುದು ಗಮನಾರ್ಹ.
ಎಐಎಡಿಎಂಕೆ ಮೂಲಗಳ ಪ್ರಕಾರ ರವಿವಾರ ಸಂಜೆ ಸುಮಾರು 7.30 ಕ್ಕೆ ಆಸ್ಪತ್ರೆಯಲ್ಲಿದ್ದ ಜಯಲಲಿತಾ ಅವರಿಗೆ ಹೃದಯಾಘಾತವಾಗಿದ್ದರೆ ಇದಾದ ಮೂರು ಗಂಟೆಗಳ ತರುವಾಯ ಪನ್ನೀರ್ ಸೆಲ್ವಂ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು ಹಾಗೂ ಸಚಿವರುಗಳಿಗೆ ಜಯಲಲಿತಾ ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆಯೆಂದು ಹೇಳಲಾಗಿತ್ತು. ಶಸ್ತ್ರಕ್ರಿಯೆ ನಂತರದ ಚಿಕಿತ್ಸೆಗಾಗಿ ಆಕೆಯನ್ನು ಐಸಿಯುಗೆ ಸ್ಥಳಾಂತರಿಸಲಾಯಿತೆಂದು ಮುಂಜಾವು 4 ಗಂಟೆಗೆ ಸಚಿವರು ಹಾಗೂ ಶಾಸಕರುಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ಜಯಲಲಿತಾ ಅವರನ್ನು ಶಶಿಕಲಾ ಹಾಗೂ ಪ್ರಮುಖ ಸಲಹೆಗಾರರಾದ ಶೀಲಾ ಬಾಲಕೃಷ್ಣನ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನೋಡುವ ಹಾಗಿರಲಿಲ್ಲ. ಅದಕ್ಕಾಗಿ ವಿಶೇಷವಾಗಿ ಪರದೆಗಳನ್ನು ಅಳವಡಿಸಲಾಗಿತ್ತು.
ರಾತ್ರಿಯಿಡೀ ನಡೆದ ಪ್ರಕ್ರಿಯೆ ಇಸಿಎಂಒ ಸಾಧನ ಅಳವಡಿಸಿ ಆಕೆಯ ಹೃದಯ ಹಾಗೂ ಶ್ವಾಸಕೋಶ ಕಾರ್ಯಾಚರಿಸುವಂತೆ ಮಾಡುವುದಾಗಿತ್ತು ಎಂದು ನಂತರವಷ್ಟೇ ಅಲ್ಲಿದ್ದ ಪಕ್ಷದವರಿಗೆ ತಿಳಿದು ಬಂದಿತ್ತು.
ಮರುದಿನ ಬೆಳಗ್ಗೆ ಎಲ್ಲ ಶಾಸಕರು ಹಾಗೂ ಸಚಿವರನ್ನು ಅಪೋಲೋ ಆಸ್ಪತ್ರೆಯ ತಳ ಅಂತಸ್ತಿಗೆ ಕರೆಸಿ ಅಲ್ಲಿ ಪ್ರತಿಯೊಬ್ಬರಿಗೂ ಮೂರು ಖಾಲಿ ಎ-4 ಹಾಳೆಗಳಲ್ಲಿ ಸಹಿ ಹಾಕುವಂತೆ ಹೇಳಲಾಗಿತ್ತು ಈ ಹಾಳೆಗಳಲ್ಲಿ ಅವರ ಹೆಸರಲ್ಲದೆ ಬೇರೇನೂ ಮಾಹಿತಿಯಿರಲಿಲ್ಲ. ಪಕ್ಷದ ಸಭೆಯೊಂದು ನಡೆದಿದೆಯೆಂಬುದಕ್ಕೆ ಪುರಾವೆಯೊದಗಿಸಲು ಅವರೆಲ್ಲರಿಗೂ ಒಂದು ರಿಜಿಸ್ಟರ್ ನಲ್ಲಿ ಸಹಿ ಹಾಕುವಂತೆಯೂ ಹೇಳಲಾಗಿತ್ತು.
ಸುಮಾರು 2 ಗಂಟೆ ಹೊತ್ತಿಗೆ ಜಯಲಲಿತಾ ಅಸುನೀಗಿದ್ದಾರೆಂಬ ಸುದ್ದಿ ಬಂದ ತಕ್ಷಣ ಶಾಸಕರೆಲ್ಲರೂ ಕಣ್ಣೀರ ಕೋಡಿಯಾಗಿದ್ದರು. ಅವರನ್ನು ಮತ್ತೆ ಸಂಜೆ 6 ಗಂಟೆಗೆ ಪಕ್ಷ ಕಚೇರಿಗೆ ಬರಲು ಹೇಳಲಾಗಿತ್ತು. ಆದರೆ ಅವರು ಅಲ್ಲಿ ಬಂದಾಗ ಪನ್ನೀರ್ ಸೆಲ್ವಂ ಸೇರಿದಂತೆ ಐದು ಮಂದಿ ಹಿರಿಯ ಸಚಿವರು ಅಲ್ಲಿರಲಿಲ್ಲ. ಈ ಸಂದರ್ಭದಲ್ಲಿ ಶಶಿಕಲಾ ಅಧಿಕಾರ ಹಸ್ತಾಂತರ ಕುರಿತು ಹಿರಿಯ ನಾಯಕರೊಂದಿಗೆ ಒಂದು ಒಪ್ಪಂದಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.
ಸುದ್ದಿ ಚಾನೆಲ್ ಗಳು ಜಯಲಲಿತಾ ಮೃತರಾಗಿದ್ದಾರೆಂದು ಸಂಜೆ 5 ಗಂಟೆ ಹೊತ್ತಿಗೆ ಹೇಳಿಕೊಂಡಿತ್ತಾದರೂ, ಹಾಗೇನೂ ಇಲ್ಲವೆಂದು ಆಸ್ಪತ್ರೆ ಸ್ಪಷ್ಟೀಕರಣ ನೀಡಿತ್ತು. ನಂತರ ಶಾಸಕರನ್ನು ಪಕ್ಷದ ಕಚೇರಿಯಿಂದ ಆಸ್ಪತ್ರೆಗೆ ಹೋಗಲು ಅವಕಾಶ ನೀಡಲಾಗಿರಲಿಲ್ಲ. ರಾತ್ರಿ ಸುಮಾರು 11 ಗಂಟೆಗೆ ಸಭೆಯಲ್ಲಿ ಹಾಜರಿರದಿದ್ದ ಐದು ಸಚಿವರು ಅಲ್ಲಿಗೆ ಬಂದಿದ್ದರು. ಪಕ್ಷದ ಅಧ್ಯಕ್ಷ ಮಧುಸೂಧನನ್ ಒಂದು ವಾಕ್ಯದ ಹೇಳಿಕೆಯನ್ನು ಓದಿದರು -ಪನ್ನೀರ್ ಸೆಲ್ವಂ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆಂದು ಆಗ ತಿಳಿದಿತ್ತು.
ಅಲ್ಲಿದ್ದ ಸುಮಾರು 30ರಷ್ಟು ಸಚಿವರನ್ನು ಬಸ್ಸುಗಳಲ್ಲಿ ರಾಜಭವನಕ್ಕೆ ಕರೆದೊಯ್ದು ಅಲ್ಲಿ ಅವರೆಲ್ಲಾ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಲಿ ಅದಕ್ಕಾಗಿ ಎಲ್ಲಾ ಏರ್ಪಾಟುಗಳನ್ನು ಮಾಡಲಾಗಿತ್ತು. ಸುಮಾರು 30 ನಿಮಿಷಗಳ ನಂತರ ಅಂದರೆ ಮಧ್ಯರಾತ್ರಿ 12.40ರ ಹೊತ್ತಿಗೆ ಜಯಲಲಿತಾ ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು







