ಭೀಮಾ ನಾಯ್ಕ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು, ಡಿ.8: ಬೆಂಗಳೂರು ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಲಾಗಿದೆ
ಭೀಮಾ ನಾಯ್ಕ ಸರಕಾರಿ ಉದ್ಯೋಗದಲ್ಲಿದ್ದುಕೊಂಡು ಭಾರೀ ಭ್ರಷ್ಟಾಚಾರ ಮಾಡಿದ್ದು, ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಮಂಜುನಾಥ ನಗರದ ನಿವಾಸಿ ಮಂಜುನಾಥ ಎಸಿಬಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.
ಭೀಮಾ ನಾಯ್ಕರ ಕಾರು ಚಾಲಕ ರಮೇಶ್ ಗೌಡ ಮಂಗಳವಾರ ರಾತ್ರಿ ಮದ್ದೂರಿನ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸ್ಥಳದಲ್ಲಿ ಪತ್ತೆಯಾಗಿದ್ದ ಡೆತ್‌ನೋಟ್‌ನಲ್ಲಿ ಭೀಮಾ ನಾಯ್ಕರ ಅಕ್ರಮ ಆಸ್ತಿ ಬಗ್ಗೆ ಉಲ್ಲೇಖವಾಗಿತ್ತು.
Next Story





