ದುಬೈ ಚಲನಚಿತ್ರೋತ್ಸವಕ್ಕೆ ವರ್ಣರಂಜಿತ ಚಾಲನೆ

ದುಬೈ,ಡಿ. 8: ಹದಿಮೂರನೆ ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವರ್ಣರಂಜಿತ ಚಾಲನೆ ನೀಡಲಾಗಿದೆ. ಚಲನಚಿತ್ರ ರಂಗಕ್ಕೆ ನೀಡಿದ ಸಮಗ್ರಕೊಡುಗೆಯನ್ನು ಪರಿಗಣಿಸಿ ಭಾರತೀಯ ಮೇರು ನಟಿ ರೇಖಾ, ಫ್ರೆಂಚ್-ಲೆಬನೀಸ್ ಸಂಗೀತ ತಜ್ಞ ಗ್ಯಾಬ್ರಿಯಲ್ ಯರೇದ್, ಪ್ರಸಿದ್ಧ ನಟ ಸ್ಯಾಮುವೇಲ್ ಎಲ್ ಜಾಕ್ಸನ್‌ರಿಗೆ ದುಬೈ ರಾಜಕುಮಾರ ಶೇಖ್ ಮನ್ಸೂರ್ ಬಿನ್ ಹಮ್ಮದ್ ರಾಶಿದ್ ಅಲ್ ಮಕ್ತೂಂ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ನೀಡಿ ಗೌರವಿಸಿದ್ದಾರೆಂದು ವರದಿಯಾಗಿದೆ.
ಉದ್ಘಾಟನ ಚಲನಚಿತ್ರ ಮಿಸ್ ಸ್ಲೋಎನ್‌ನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು.ಇದೇವೇಳೆ ಜೆಬಿಆರ್ ಬೀಚ್‌ನಲ್ಲಿ ಬಹಿರಂಗ ವೇದಿಕೆಯಲ್ಲಿ ಸಾರ್ವಜನಿಕರಿಗಾಗಿ ಬೆನ್ ಯುವರ್ ಮ್ಯಾಪ್ಸ್‌ನ್ನು ಪ್ರದರ್ಶಿಸಲಾಯಿತು.
ಇಂದು ಬಾಲಿವುಡ್‌ನ ಸಾರ್ವಕಾಲಿಕ ಪ್ರೇಮ್ ಕಹಾನಿ ದಿಲ್‌ವಾಲೆ ದುಲ್‌ಹನಿಯ ಲೇಜಾಯೆಂಗೆ ನಿರ್ಮಿಸಿರುವ ಆದಿತ್ಯ ಚೋಪ್ರರ ಹೊಸ ಚಿತ್ರ ಬೇಫಿಕ್ರ್‌ನ ಮೊದಲ ಪ್ರದರ್ಶನ ಮದೀನತ್ ಅರೀನದಲ್ಲಿ ನಡೆಯಲಿದೆ. ಏಳುಗಂಟೆಗೆ ಆರಂಭವಾಗುವ ಸ್ಕ್ರೀನಿಂಗ್‌ನಲ್ಲಿ ನಿರ್ದೇಶಕರು ಭಾಗವಹಿಸಲಿದ್ದಾರೆ. ಬಿಲ್ಲಿ ಲಿನ್ಸ್ ಲಾಂಗ್ ಹಾಫ್‌ಟೈಂ ವಾಕ್ ಸಾರ್ವಜನಿಕ ಪ್ರದರ್ಶನಗೊಳ್ಳಲಿರುವ ಇನ್ನೊಂದು ಚಿತ್ರವಾಗಿದೆ. ಇದರ ಪ್ರದರ್ಶನ ರಾತ್ರಿ 10:30ಕ್ಕೆ ನಡೆಯಲಿದೆ. ಬೀಚ್‌ನಲ್ಲಿ ಸಾರ್ವಜನಿಕ ಪ್ರದರ್ಶನ ಸಂಜೆ 7:30ಕ್ಕೆ ನಡೆಯಲಿದೆ. ಆ್ಯಮಿನೇಷನ್ ಚಿತ್ರವಾದ ರೆಡ್ ಟರ್ಟಿಲ್‌ನನ್ನು ನೋಡಲು ಮಕ್ಕಳ ಸಹಿತ ಭಾರೀ ಜನಸಂಖ್ಯೆ ಜನರು ನೆರೆಯುವ ನಿರೀಕ್ಷೆ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ.







