ಸಿನೆಮಾಗಳನ್ನು ಇಂಟರ್‌ನೆಟ್‌ಗೆ ಹಾಕುವ ಜಾಲದ ಮೂವರ ಬಂಧನ

ಕೊಯಮತ್ತೂರ್, ಡಿಸೆಂಬರ್ 8: ಸಿನೆಮಾಗಳನ್ನು ಇಂಟರ್‌ನೆಟ್‌ಗೆ ಹಾಕುವ ಜಾಲದ ಪ್ರಧಾನ ಕೊಂಡಿಯಾಗಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ತಮಿಳ್ ರೆಕಾರ್ಡ್ಸ್ ವೆಬ್‌ಸೈಟ್‌ನ ನಿರ್ವಾಹಕರಾದ ಸತೀಶ್, ಶ್ರೀನಿ, ಭುವನೇಶ್ ಎಂಬವರನ್ನು ಕೊಯಮತ್ತೂರ್ ಪೊಲೀಸರು ಬಂಧಿಸಿದ್ದಾರೆ.
ಡಿವೈಎಸ್ಪಿ ಇಕ್ಬಾಲ್‌ರ ನೇತೃತ್ವದ ಆ್ಯಂಟಿ ಪೈರಸಿ ಸೆಲ್ ನಡೆಸಿದ ದಾಳಿಯಲ್ಲಿ ಇವರು ಸೆರೆಸಿಕ್ಕಿದ್ದಾರೆ. ಮಲೆಯಾಳಂ, ತಮಿಳ್, ತೆಲುಗು ಸಿನೆಮಾಗಳನ್ನು ರಿಲೀಸ್ ಮಾಡಿದ ಕೂಡಲೇ ಸೋರಿಕೆ ಮಾಡಿ ಇವರು ಇಂಟರ್‌ನೆಟ್‌ಗೆ ಅಪ್‌ಲೋಡ್ ಮಾಡುತ್ತಿದ್ದರು. ಇದಕ್ಕೆಂದು ಇವರು ಕೊಯಮತ್ತೂರಿನಲ್ಲಿ ಕಚೇರಿ ಇಟ್ಟುಕೊಂಡಿದ್ದರು.
ತಮಿಳ್ ಟೊರಂಟ್ ಸೈಟ್‌ಗಳಲ್ಲಿ ಸಿನೆಮಾ ಸೋರಿಕೆ ಮಾಡಿ ಅಪ್‌ಲೋಡ್ ಮಾಡುತ್ತಿದ್ದ ಖದೀಮರು ಇವರನ್ನೆಲಾಗಿದೆ. ಅಂತಾರಾಷ್ಟ್ರೀಯ ಪೈರಸಿ ಮಾಫಿಯಾದೊಂದಿಗೆ ಇವರಿಗೆ ಸಂಬಂಧ ಇರುವುದಾಗಿ ವರದಿಯಿವೆ. ಪುಲಿಮುರುಗನ್ ಸಿನೆಮಾ ಸೋರಿಕೆ ಸಂಬಂಧಿಸಿ ನಡೆದ ತನಿಖೆಯಲ್ಲಿ ಇವರು ಸೆರೆಯಾಗಿದ್ದಾರೆಂದು ವರದಿ ತಿಳಿಸಿದೆ.
Next Story





