ಕೊನೆಗೂ ಉದ್ಘಾಟನೆಗೊಂಡ ಮರ್ಧಾಳ ಸಾರ್ವಜನಿಕ ಶೌಚಾಲಯ

ಕಡಬ, ಡಿ.8. ಕಳೆದ ಸುಮಾರು ಆರು ತಿಂಗಳಿನಿಂದ ಕಾಮಗಾರಿ ಪೂರ್ಣಗೊಂಡು ಬಿಡುಗಡೆಗೆ ಬಾಕಿಯಾಗಿದ್ದ ಸುಬ್ರಹ್ಮಣ್ಯ - ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳದ ಸಾರ್ವಜನಿಕ ಶೌಚಾಲಯಕ್ಕೆ ಕೊನೆಗೂ ಉದ್ಘಾಟನಾ ಭಾಗ್ಯ ದೊರಕಿದ್ದು,ಗುರುವಾರದಂದು ಕಡಬ ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ಮರ್ಧಾಳದಲ್ಲಿ ಸಾರ್ವಜನಿಕರು ತಮ್ಮ ಬಹಿರ್ದೆಸೆಗೆಂದು ಹಲವು ಸಮಯಗಳಿಂದ ಶೌಚಾಲಯದ ಬೇಡಿಕೆಯನ್ನು ಮರ್ಧಾಳ ಗ್ರಾಮ ಪಂಚಾಯತ್‌ನ ಮುಂದಿಟ್ಟಿದ್ದರು. 2014ರಲ್ಲಿ ಆಗಿನ ಜಿ.ಪಂ. ಸದಸ್ಯರಾಗಿದ್ದ ಕುಮಾರಿ ವಾಸುದೇವನ್‌ರವರು ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 4.00 ಲಕ್ಷ ಅನುದಾನವನ್ನು ಒದಗಿಸಿಕೊಟ್ಟಿದ್ದರು. ಈ ಹಣದಲ್ಲಿ ಮರ್ಧಾಳ ಗ್ರಾ.ಪಂ. ಆವರಣದಲ್ಲಿ ನೂತನವಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಕಳೆದ ಆರು ತಿಂಗಳಿನಿಂದ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡದಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿತ್ತು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ, ಮರ್ಧಾಳ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಎಂ., ಉಪಾಧ್ಯಕ್ಷೆ ಲತಾ ಕೆ.ಎಸ್., ಸದಸ್ಯರಾದ ಹರೀಶ್ ಕೋಡಂದೂರು, ಸುಲೈಮಾನ್, ದಾಮೋದರ ಗೌಡ ಡೆಪ್ಪುಣಿ, ಗಿರಿಜಾ, ಮೀನಾಕ್ಷಿ, ಕಡಬ ಗ್ರಾ.ಪಂ. ಸದಸ್ಯರಾದ ಹಾಜಿ ಹನೀಫ್ ಕೆ.ಎಂ., ಅಶ್ರಫ್ ಶೇಡಿಗುಂಡಿ, ಮರ್ಧಾಳ ಗ್ರಾ.ಪಂ. ಮಾಜಿ ಸದಸ್ಯ ಜನಾರ್ಧನ ಗೌಡ ಪುತ್ತಿಲ, ಪಿಡಿಓ ವೆಂಕಟ್ರಮಣ, ಕಾರ್ಯದರ್ಶಿ ಭುವನೇಂದ್ರ ಕುಮಾರ್, ಸಿಬ್ಬಂದಿಗಳಾದ ಹಸನ್, ಆಶಾ, ವಾಮನ ನಾಕ್ ಮೊದಲಾದವರು ಉಪಸ್ಥಿತರಿದ್ದರು.







