ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಪೊಲೀಸ್ ಕಾನ್ಸ್ ಸ್ಟೇಬಲ್ ಅಮಾನತು

ಮಂಗಳೂರು, ಡಿ.8: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್ ಸ್ಟೇಬಲ್ ನ್ನು ಅಮಾನತು ಮಾಡಿದ್ದಾರೆ.
ಬೆಂಗರೆಯ ವಿವಾಹಿತ ಮಹಿಳೆಯೊಬ್ಬರನ್ನು ವಿಚಾರಣೆಯ ನೆಪದಲ್ಲಿ ಪಣಂಬೂರು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ವಿನಯ್ ಎಂಬವರು ಕಳೆದ ಸೋಮವಾರದಿಂದ ಮೊಬೈಲ್ ಮೂಲಕ ಸಂಪರ್ಕಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಹಿಳೆ ಸ್ಥಳೀಯ ಡಿವೈಎಫ್‌ಐ ಕಾರ್ಯಕರ್ತರ ಗಮನಕ್ಕೆ ತಂದಿದ್ದು, ಅದರಂತೆ ವಿನಯ್‌ನ ಫೋನ್ ಕರೆಗಳನ್ನು ರೆಕಾರ್ಡ್ ಮಾಡಿ ಬುಧವಾರ ಪೊಲೀಸ್ ಆಯುಕ್ತ ಚಂದ್ರಶೇಖರ್‌ಗೆ ದೂರು ನೀಡಲಾಯಿತು.
ತಕ್ಷಣ ಆಯುಕ್ತರು, ಉಪಾಯುಕ್ತರು ಮತ್ತು ಮಹಿಳಾ ಇನ್‌ಸ್ಪೆಕ್ಟರ್‌ರನ್ನು ಸೂಚನೆ ನೀಡಿದರು. ಮಹಿಳೆ ನೀಡಿದ ದೂರಿನಂತೆ ಪಣಂಬೂರು ಠಾಣೆಯ ಪೊಲೀಸರ ವಿರುದ್ಧ ಬುಧವಾರ ದೂರು ನೀಡಿದರು. ಸೆ.364 (ಎ) ಮತ್ತು ಸೆ.364 (ಡಿ)ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಮಾನತು:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ಆರೋಪಿ ಪೊಲೀಸ್ ನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜಾಮೀನು:
ಆರೋಪಿ ಪೊಲೀಸ್ ವಿನಯ್ ಠಾಣೆಯಿಂದಲೇ ಜಾಮೀನು ಪಡೆದುಕೊಂಡಿರುವುದಾಗಿ ಮಹಿಳಾ ಇನ್‌ಸ್ಪೆಕ್ಟರ್ ಕಲಾವತಿ ತಿಳಿಸಿದ್ದಾರೆ.







