ತಲಪಾಡಿ: ಚರಂಡಿ ಕಾಮಗಾರಿಗೆ ಚಾಲನೆ
ಉಳ್ಳಾಲ, ಡಿ.8 : ತಲಪಾಡಿ ವಿಜಯಾ ಬ್ಯಾಂಕ್ ಬಳಿ ತಾಲೂಕು ಪಂಚಾಯಿತಿ ಅನುದಾನದಲ್ಲಿ 1ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೊದಲ ಹಂತದ ಚರಂಡಿ ಕಾಮಗಾರಿಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬುಧವಾರದಂದು ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಉತ್ಸಾಹಿ ತರುಣರು ಚುನಾವಣೆಯಲ್ಲಿ ಗೆದ್ದು ಬಂದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸುವುದಲ್ಲದೆ ಪಣತೊಟ್ಟು ವಿವಿಧ ಮೂಲಗಳಿಂದ ಅನುದಾನಗಳನ್ನು ತಂದು ಕಾಮಗಾರಿ ನಡೆಸಬಹುದು ಎಂದು ಅಭಿಪ್ರಾಯಪಟ್ಟರು.
ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಆಳ್ವ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದ್ದು, ತಾಲೂಕು ಪಂಚಾಯತ್ ಸದಸ್ಯರು ಬಹಳ ಮುತುವರ್ಜಿ ವಹಿಸಿ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡದ್ದು ಸ್ವಾಗತಾರ್ಹ. ಪಕ್ಷಭೇಧ ಮರೆತು ಎಲ್ಲರೂ ಸೇರಿ ತಲಪಾಡಿಯ ಅಭಿವೃದ್ಧಿಯತ್ತ ಗಮನ ಕೊಡಬೇಕಾಗಿ ಹೇಳಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂತೋಷ್ ಕುಮಾರ್ ಶೆಟ್ಟಿಯನ್ನು ತಾ.ಪಂ ಸದಸ್ಯ ಸಿದ್ಧೀಕ್ ಕೊಳಂಗೆರೆ ಮತ್ತು ಪಕ್ಷದ ಕಾರ್ಯಕರ್ತರು ಅಭಿನಂದಿಸಿದರು.
ತಲಪಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಜಯರಾಮ್ ಶೆಟ್ಟಿ,ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಕ್ ತಲಪಾಡಿ,ಕಾಂಗ್ರೆಸ್ ಸ್ಥಳೀಯ ಮುಖಂಡ ಗಣೇಶ್ ತಲಪಾಡಿ,ಗೋಪಾಲ್ ತಛ್ಛಾಣಿ ಮೊದಲಾದವರು ಉಪಸ್ಥಿತರಿದ್ದರು.





.jpg.jpg)



