ಆದಾಯ ತೆರಿಗೆ ದಾಳಿ: 7 ಕೋಟಿ ರೂ. ಹೊಸ ನೋಟು ಸಹಿತ 90 ಕೋಟಿ ನಗದು , 100 ಕೆಜಿ ಚಿನ್ನ ಪತ್ತೆ !

ಚೆನ್ನೈ, ಡಿ.8: ಇಲ್ಲಿನ ಆಭರಣ ವ್ಯಾಪಾರಿಗಳು ಹಾಗೂ ಮರಳು ಗಣಿಗಾರರ ಮನೆಗಳಿಗೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಇಂದು ರೂ.90 ಕೋಟಿ ನಗದು ಹಾಗೂ 100 ಕಿ.ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ನಗರದ 8 ಸ್ಥಳಗಳಿಗೆ ದಾಳಿ ನಡೆಸಲಾಗಿತ್ತೆಂದು ಮೂಲಗಳು ತಿಳಿಸಿವೆ.
ಪತ್ತೆಯಾದ ಹಣದಲ್ಲಿ ರೂ.7 ಕೋಟಿ ಮೌಲ್ಯದ ಹೊಸ ಹೋಟುಗಳು ಹಾಗು ರೂ.83 ಕೋಟಿಯ ರದ್ದಾದ ರೂ.500 ಹಾಗೂ 1000ದ ನೋಟುಗಳಿದ್ದವು. ಎಣಿಕೆ ಇನ್ನೂ ಮುಂದುವರಿದಿದೆ.
ನೋಟು ರದ್ದತಿಯ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ನಿಯಮಿತ ದಾಳಿಗಳನ್ನು ನಡೆಸುತ್ತ ಬಂದಿದ್ದಾರೆ. ಡಿ.6ರ ವರೆಗೆ, ರೂ.130 ಕೋಟಿ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ. ಲೆಕ್ಕ ನೀಡದ ರೂ. 2 ಸಾವಿರ ಕೋಟಿ ಸಂಪತ್ತನ್ನು ತೆರಿಗೆದಾರರು ಘೋಷಿಸಿದ್ದಾರೆಂದು ಇಲಾಖೆ ತಿಳಿಸಿದೆ.
ನ.8ರ ಬಳಿಕ, ಅಘೋಷಿತ ಆಸ್ತಿಗಳ 400 ಪ್ರಕರಣಗಳ ತನಿಖೆಯನ್ನು ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಇಂದು ವಶಪಡಿಸಿಕೊಳ್ಳಲಾಗಿರುವ ಚಿನ್ನದ ಮೌಲ್ಯ ರೂ.29 ಕೋಟಿ.
Next Story





