ದುಶ್ಚಟಗಳಿಂದ ದೂರವಿರಲು ಯುವಕರಿಗೆ ಸಖಾಫಿ ಕರೆ

ಮಂಗಳೂರು, ಡಿ. 8: ಗಾಂಜಾ, ಚೀಟಿ ಎತ್ತುವುದು ಮುಂತಾದ ದುಶ್ಚಟಗಳಿಗೆ ಇಸ್ಲಾಂನಲ್ಲಿ ಅವಕಾಶ ಇಲ್ಲ. ಪ್ರವಾದಿಯವರು ಇದಕ್ಕೆ ಆಸ್ಪದ ಕೊಡಲಿಲ್ಲ. ಆದ್ದರಿಂದ ಇಂತಹ ದುಶ್ಚಟಗಳಿಂದ ದೂರ ಇರುವಂತೆ ನೌಫಲ್ ಸಖಾಫಿ ಕಳಸ ಮುಸ್ಲಿಂ ಯುವಕರಿಗೆ ಕರೆ ನೀಡಿದ್ದಾರೆ.
ಅವರು ನೂರ್ ಎ ಮದೀನ ನಿಡ್ಮಾಡ್ ಬ್ರದರ್ಸ್ ವತಿಯಿಂದ ಜರಗಿದ ಹುಬ್ಬುರ್ರಸೂಲ್ ಕಾರ್ಯಕ್ರಮ ಮತ್ತು ಬಸ್ ತಂಗುದಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಮಾತನಾಡಿ, ಪ್ರವಾದಿಯವರ ಮೇಲೆ ಪ್ರೀತಿ , ವಿಶ್ವಾಸ ನಂಬಿಕೆಯಿಂದ ಕಾರ್ಯಕ್ರಮ ಮಾಡಬೇಕೆಂದರು.
ಸಯ್ಯದ್ ಅಶ್ರಫ್ ತಂಙಳ್ ಆದೂರು ಮಾತನಾಡಿ, ಪ್ರವಾದಿಯವರು ಧರ್ಮ ಮತ್ತು ಸಮಾಜಕ್ಕಾಗಿ ಬಹಳಷ್ಟು ಸೇವೆ ಮಾಡಿದ್ದಾರೆ. ನಾವು ಕೂಡ ಸಮಾಜ ಸೇವೆ ಮಾಡಬೇಕೆಂದರು.
ಸಚಿವ ಯು.ಟಿ. ಖಾದರ್ ಬಸ್ ತಂಗುದಾಣವನ್ನು ಉದ್ಘಾಟಿಸಿದರು.
ಅಬ್ಬಾಸ್ ಸಖಾಫಿ ಮರಿಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಹಿದ್ದೀನ್ ಸಅದಿ ತೋಟಾಲ್, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಡಾ. ಮುನೀರ್ ಬಾವಾ, ಕತ್ತರ್ ಬಾವಾ ಹಾಜಿ, ಇಸ್ಮಾಯೀಲ್ ಮಾಸ್ಟರ್ ಬಡುವ ಕುಂಞಿ ನಿಡ್ಮಾಡ್, ಮಹ್ಮೂದ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಮನ್ಸೂರ್ ಸ್ವಾಗತಿಸಿದರು. ಬಶೀರ್ ಎನ್.ಬಿ. ವಂದಿಸಿದರು.







