ಕಲ್ಲಿದ್ದಲು ಹಗರಣ: ಚಾರ್ಜ್‌ಶೀಟ್ ಸಲ್ಲಿಕೆ

ಹೊಸದಿಲ್ಲಿ, ಡಿ.8: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ವಿರುದ್ಧ ಸಿಬಿಐ ಹೊಸದಾಗಿ ಚಾರ್ಜ್‌ಶೀಟ್ ಸಲ್ಲಿಸಿದೆ. ಛತ್ತೀಸ್‌ಗಡ ಮೂಲದ ಕಲ್ಲಿದ್ದಲು ಗಣಿಯನ್ನು ಎಸ್‌ಕೆಎಸ್ ಇಸ್ಪಾಟ್ ಆ್ಯಂಡ್ ಪವರ್ ಕಂಪೆನಿಗೆ ಕಾನೂನು ಉಲ್ಲಂಘಿಸಿ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಇವರ ಜೊತೆಗೆ, ಹಿರಿಯ ಅಧಿಕಾರಿ ಕೆ.ಎಸ್.ಕ್ರೊಫ, ಎಸ್‌ಕೆಎಸ್ ಇಸ್ಪಾಟ್ ಸಂಸ್ಥೆ, ಅದರ ಇಬ್ಬರು ನಿರ್ದೇಶಕರಾದ ಅನಿಲ್ ಗುಪ್ತಾ ಮತ್ತು ದೀಪಕ್ ಗುಪ್ತಾ ಹಾಗೂ ಇತರ ಮೂವರಾದ ಅಮಿತ್ ಸಿಂಗ್, ರಾಕೇಶ್ ಸಿಂಗ್ ಮತ್ತು ಜಗನ್ನಾಥ ಪಂಡಾ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
Next Story





