ಟಾಟಾ ಸುಮೋ ಪಲ್ಟಿ : ಇಬ್ಬರ ಸಾವು

ಮೈಸೂರು, ಡಿ.8 : ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಪಲ್ಟಿಯಾಗಿ ಇಬ್ಬರು ಸಾವಿಗೀಡಾದ ಘಟನೆ ನಂಜನಗೂಡು ತಾಲೂಕಿನ ಕಳ್ಳಲೆಗೇಟ್ ಬಳಿ ನಡೆದಿದೆ.
ಸಾವಿಗೀಡಾದವರನ್ನು ನಿತೀಶ್ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ.
ಸುಮೋ ದಲ್ಲಿದ್ದ 6 ಮಂದಿ ಗಾಯಗೊಂಡು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ನಂಜನಗೂಡು ಸಂಚಾರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ
Next Story





