‘ಎಕ್ಸ್‌ಪೇ ಕ್ಯಾಶ್ ವ್ಯಾಲೇಟ್’ ಹಣ ವರ್ಗಾವಣೆ ಆ್ಯಪ್

ಉಡುಪಿ, ಡಿ.8: ನೋಟು ರದ್ಧತಿಯಿಂದ ಉಂಟಾಗಿರುವ ಆರ್ಥಿಕ ಮುಗ್ಗಟ್ಟಿಗೆ ಪರಿಹಾರವಾಗಿ ಯುಎಇ ಎಕ್ಸ್‌ಚೇಂಜ್ ವತಿಯಿಂದ ಎಕ್ಸ್‌ಪೇ ಕ್ಯಾಶ್ ವ್ಯಾಲೇಟ್ ಎಂಬ ಆಧುನಿಕ ಹಣ ವರ್ಗಾವಣೆ ಆ್ಯಪ್‌ನ್ನು ಆರ್‌ಬಿಐ ಯಿಂದ ಅನುಮತಿ ಪಡೆದು ಗ್ರಾಹಕರಿಗೆ ಪರಿಚಯಿಸಲಾಗಿದೆ. ಇದರಿಂದ ಯಾವುದೇ ರೀತಿಯ ಹಣ ವರ್ಗಾವಣೆ, ಪಾವತಿ ಮತ್ತು ಸ್ವೀಕೃತಿಗಳನ್ನು ಗ್ರಾಹಕರು ಬಳಸಿಕೊಳ್ಳಬಹುದು. ಈ ಅಪ್‌ನ್ನು ಆ್ಯಪ್ ಸ್ಟೋರ್ ಅಥವಾ ಯುಎಇ ಎಕ್ಸ್‌ಚೇಂಜ್‌ನ ಜಾಲತಾಣದಲ್ಲಿ ಪಡೆಯ ಬಹುದು ಎಂದು ಉಡುಪಿಯ ಪ್ರಾದೇಶಿಕ ವ್ಯವಸ್ಥಾಪಕ ಶರತ್ ಶೆಟ್ಟಿ ಕೆ.ಎಂ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ವರ್ಷದ ದುಬೈ ಶಾಪಿಂಗ್ ಉತ್ಸವ ಟೂರ್ ಪ್ಯಾಕೇಜ್‌ನ್ನು ಜ.20 ರಿಂದ ಮಾ.25ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಅತಿ ಕಡಿಮೆ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಟೂರ್ ಪ್ಯಾಕೇಜ್ ಇದಾಗಿದ್ದು, ಗ್ರಾಹಕರ ಉಪ ಯೋಗಕ್ಕಾಗಿ ಈಗಾಗಲೇ ಟೂರ್ ಪ್ಯಾಕೇಜ್ ಬುಕ್ಕಿಂಗ್ ಆರಂಭಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಉಡುಪಿ ಪ್ರಾದೇಶಿಕ ಕಚೇರಿ ಅಥವಾ ಮೊಬೈಲ್- 9845286876ನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಲಯ ಮುಖ್ಯಸ್ಥ ಗೋಪಿನಾಥ್ ನಾಯರ್, ಉಡುಪಿ ಶಾಖಾ ಮುಖ್ಯಸ್ಥ ಪುಷ್ಪರಾಜ್ ಶೆಟ್ಟಿ, ಮಣಿಪಾಲ ಶಾಖಾ ಮುಖ್ಯಸ್ಥ ಬಾಲಕೃಷ್ಣ ಆಚಾರ್ಯ, ಐಎಟಿಎ ಮುಖ್ಯಸ್ಥ ಭುವನೇಶ್ ಉಪಸ್ಥಿತರಿದ್ದರು.







