ಭಾರತದಲ್ಲಿ ಕ್ರೀಡಾ ತಂಡಗಳು ಭಾಗವಹಿಸದಂತೆ ಪಾಕ್ ನಿರ್ಬಂಧ?
ಕರಾಚಿ, ಡಿ.8: ಭಾರತೀಯ ನೆಲದಲ್ಲಿ ನಡೆಯುವ ಯಾವುದೇ ಟೂರ್ನಿಗಳಲ್ಲಿ ದೇಶದ ಎಲ್ಲ ಕ್ರೀಡಾ ತಂಡಗಳು ಭಾಗವಹಿಸದಂತೆ ಸಂಪೂರ್ಣ ನಿಷೇಧ ಹೇರುವ ಬಗ್ಗೆ ಸಂಬಂಧಪಟ್ಟ ಸರಕಾರಿ ಸಚಿವಾಲಯವನ್ನು ಸಂಪರ್ಕಿಸಲಾಗುತ್ತಿದೆ ಎಂದು ಪಾಕಿಸ್ತಾನ ಕ್ರೀಡಾ ಸಚಿವ ರಿಯಾಝ್ ಪಿರ್ಝಾದ ಹೇಳಿದ್ದಾರೆ.
ಭಾರತೀಯ ಹೈಕಮಿಶನ್ ಹಾಗೂ ಭಾರತೀಯ ಅಧಿಕಾರಿಯ ನೇತೃತ್ವದ ಅಂತಾರಾಷ್ಟ್ರೀಯ ಹಾಕಿ ಸಂಘಟನೆಯು ಪಾಕಿಸ್ತಾನದ ಜೂನಿಯರ್ ಹಾಕಿ ತಂಡವನ್ನು ನಡೆಸಿಕೊಂಡ ರೀತಿಯ ಬಳಿಕ ನಾವು ಇಂತಹ ಕಠಿಣ ಹೆಜ್ಜೆಯನ್ನು ಇಡುತ್ತಿದ್ದೇವೆ ಎಂದು ರಿಯಾಝ್ ಸುದ್ದಿಗಾರರಿಗೆ ತಿಳಿಸಿದರು.
ಎಫ್‌ಐಎಚ್ ಪಾಕ್ ತಂಡವನ್ನು ಗುರುವಾರ ಲಕ್ನೋದಲ್ಲಿ ಆರಂಭವಾಗಿರುವ ಜೂನಿಯರ್ ವಿಶ್ವಕಪ್‌ನಿಂದ ಕೊನೆಯ ಕ್ಷಣದಲ್ಲಿ ಕೈಬಿಟ್ಟಿತ್ತು. ನಿಗದಿತ ಗಡುವಿನ ಮೊದಲು ಪಾಕ್ ತಂಡ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ದೃಢಪಡಿಸಿಲ್ಲ ಎಂದು ಎಫ್‌ಐಎಚ್ ಹೇಳಿತ್ತು. ಜೂನಿಯರ್ ತಂಡಕ್ಕೆ ಭಾರತೀಯ ಹೈಕಮಿಶನ್ ವೀಸಾ ನೀಡದ ಕಾರಣ ಪಾಕಿಸ್ತಾನ ಹಾಕಿ ಫೆಡರೇಶನ್ ಎಫ್‌ಐಎಚ್‌ಗೆ ದೃಢೀಕರಣ ಪತ್ರವನ್ನು ಕಳುಹಿಸಿಲ್ಲ ಎನ್ನಲಾಗಿದೆ.
Next Story





