ಹಲ್ಕರೆ: 2 ಲಕ್ಷ ರೂ. ವೌಲ್ಯದ ನಗ-ನಗದು ಕಳವು
ಸಾಗರ, ಡಿ.8: ತಾಲೂಕಿನ ತುಮರಿ ಸಮೀಪದ ಹಲ್ಕರೆ ಗ್ರಾಮದ ಶ್ರೀ ಬಟ್ಟೆ ವಿನಾಯಕ ಸ್ವಾಮಿ ದೇವಸ್ಥಾನದ ಮುಂಬಾಗಿಲು ಒಡೆದ ಕಳ್ಳರು ಸುಮಾರು 2 ಲಕ್ಷ ರೂ. ಮೌಲ್ಯದ ನಗನಾಣ್ಯವನ್ನು ದೋಚಿ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ದೇವಸ್ಥಾನದ ಮುಂಬಾಗಿಲು ಒಡೆದಿರುವ ಕಳ್ಳರು ದೇವರ ಮೇಲಿದ್ದ 750 ಗ್ರಾಂ ತೂಕದ ಬೆಳ್ಳಿ ಮುಖವಾಡ, 80 ಗ್ರಾಂ ತೂಕದ ಬಂಗಾರದ ಸರ ಹಾಗೂ ಕಾಣಿಕೆ ಹುಂಡಿಯನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಅರ್ಚಕ ಈಶ್ವರ ಅವರು ದೇವಸ್ಥಾನದ ಬಾಗಿಲು ತೆಗೆಯಲು ಬಂದಾಗ ಕಳ್ಳತನ ನಡೆದಿರುವುದು ಬಯಲಿಗೆ ಬಂದಿದೆ.
ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





